ಅರಕಲಗೂಡು: ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ತಾಲೂಕು ಕುರುಬ ಸಮಾಜದ ಯುವಕರು ಇಂದು ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿ, ಆಗ್ರಹಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಿಎಂ ನಿಂದಿಸಿದ ಪುನೀತ್ ಕೆರೆಹಳ್ಳಿ ವಿರುದ್ಧ ದೂರು - Arakalagudu hasana latest news
ಕುರುಬ ಸಮುದಾಯದ ಹಿರಿಯರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬೆಂಗಳೂರಿನ ಪುನೀತ್ ಕೆರೆಹಳ್ಳಿ ಎಂಬಾತ ಏಕವಚನದಲ್ಲಿ ಮಾತನಾಡಿ, ಅವಮಾನಿಸಿದ್ದಾನೆ. ಇದು ಸಮುದಾಯದ ಜನರ ಭಾವನೆಗೆ ಧಕ್ಕೆ ತಂದಿದೆ ಎಂದು ಕುರುಬ ಸಮಾಜದ ಯುವಕರು ಅಸಮಧಾನ ಹೊರಹಾಕಿದ್ದಾರೆ.
Man insult a siddaramaiah
ಕುರುಬ ಸಮುದಾಯದ ಹಿರಿಯರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬೆಂಗಳೂರಿನ ಪುನೀತ್ ಕೆರೆಹಳ್ಳಿ ಎಂಬಾತ ಏಕವಚನದಲ್ಲಿ ಮಾತನಾಡಿ ಅವಮಾನಿಸಿದ್ದಾನೆ. ಇದು ಸಮುದಾಯದ ಜನರ ಭಾವನೆಗೆ ಧಕ್ಕೆ ತಂದಿದೆ. ಈತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಮಾಜದ ಯುವಕರು ಒತ್ತಾಯಿಸಿದರು.
ಈ ವೇಳೆ ರಾಜ್ಯ ಕುರುಬ ಸಂಘದ ನಿರ್ದೇಶಕ ಕಿರಣ್ ಕುಮಾರ್, ಮಾಜಿ ನಿರ್ದೇಶಕ ಅನಿಲ್ ಕುಮಾರ್, ಮುಖಂಡರಾದ ಪುಟ್ಟರಾಜು, ರಾಮೇಗೌಡ, ರವಿಕುಮಾರ್, ಮಾದೇಶ್, ನವೀನ್, ಕೋನಾಪುರ ರಾಜೇಶ್, ಕುಮಾರ್, ಮಧು ಮತ್ತಿತರರು ಉಪಸ್ಥಿತರಿದ್ದರು.