ಕರ್ನಾಟಕ

karnataka

ETV Bharat / state

ಅರ್ಥಪೂರ್ಣವಾಗಿ ಜರುಗಿದ ನಗರದ ಕಲಾ, ವಾಣಿಜ್ಯ ಕಾಲೇಜಿನ ಗ್ರಾಜ್ಯುಯೇಷನ್ ಡೇ - ಹಾಸನ ಕಲಾ ಕಾಲೇಜು ಗ್ರಾಜುಯೇಷನ್ ಡೆ

ನಗರದ ಕಲಾ, ವಾಣಿಜ್ಯ ಮತ್ತು ಸ್ನಾತಕೊತ್ತರ ಕಾಲೇಜಿನಲ್ಲಿ ಮೊದಲನೇ ಗ್ರಾಜ್ಯುಯೇಷನ್ ಡೇ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು, ಈ ಸಂದರ್ಭದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಪರಿಶ್ರಮದ ಹಾದಿಯನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡರು.

college-of-art-commerce-and-postgraduate-collage-graduation-day
ಕಲಾ, ವಾಣಿಜ್ಯ ಮತ್ತು ಸ್ನಾತಕೊತ್ತರ ಕಾಲೇಜ್

By

Published : Mar 9, 2020, 12:02 AM IST

ಹಾಸನ: ಬಡತನಕ್ಕೆ ಮತ್ತು ವಿದ್ಯೆಗೆ ಅಜಗಜಾಂತರ ದೂರ, ಬಡತನ ಎಂಬ ಕತ್ತಲನ್ನು ಶಿಕ್ಷಣ ಬೆಳಗಿಸಬಹುದು ಎಂಬುವುದಕ್ಕೆ ನಗರದ ಕಲಾ, ವಾಣಿಜ್ಯ ಮತ್ತು ಸ್ನಾತಕೊತ್ತರ ಕಾಲೇಜಿನಲ್ಲಿ ನಡದ ಗ್ರಾಜ್ಯುಯೇಷನ್ ಡೇ ಕಾರ್ಯಕ್ರಮ ಸಾಕ್ಷಿಯಾಗಿತ್ತು.

ನಗರದ ಕಲಾ, ವಾಣಿಜ್ಯ ಮತ್ತು ಸ್ನಾತಕೊತ್ತರ ಕಾಲೇಜಿನಲ್ಲಿ ಮೊದಲನೇ ಗ್ರಾಜ್ಯುಯೇಷನ್ ಡೇ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು, ಈ ಸಂದರ್ಭದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಪರಿಶ್ರಮದ ಹಾದಿಯನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡರು.

ಬಡತನ, ಅಪ್ಪ ಅಮ್ಮನ ಅಗಲಿಕೆ ಇದೇಲ್ಲವುದರಿಂದ ಬೇಸತ್ತಿದ್ದ ನನಗೆ ಜೀವನ ಸಾಕಾಗಿತ್ತು, ಆದ್ರೆ ನನ್ನ ತಮ್ಮ ಧೈರ್ಯ ತುಂಬಿ ತಾನು ಶಾಲೆಗೆ ಹೋಗುವುದನ್ನು ಬಿಟ್ಟ, ಇವತ್ತು ನಾನೇನಾದ್ರು ಸಾಧಿಸಿದ್ದಿನಿ ಅಂದ್ರೆ ಅದಕ್ಕೆ ನನ್ನ ತಮ್ಮನೆ ಕಾರಣ ಎಂದು ಚಿನ್ನ ಪದಕ ಪಡೆದ ವಿದ್ಯಾರ್ಥಿನಿ ಶಮಾ ತನ್ನ ಮಾತು ಹೇಳುತ್ತಾ ಸ್ನಾತಕೋತ್ತರ ಪದವಿಯಲ್ಲಿ ನಾನು ರಾಜ್ಯಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದಿದ್ದೆನೆ ಎಂದು ತನ್ನ ಸಾಧನೆಯ ಹಿನ್ನೆಲೆಯನ್ನು ಬಿಚ್ಟಿಟ್ಟರು.

ಅರ್ಥಪೂರ್ಣವಾಗಿ ಜರುಗಿದ ನಗರದ ಕಲಾ, ವಾಣಿಜ್ಯ ಕಾಲೇಜಿನ ಗ್ರಾಜ್ಯುಯೇಷನ್ ಡೇ

ಸಗಣಿ ಬಾಚಿ, ಹಾಲು ಕರೆದು 70 ಕಿ. ಮೀ ದೂರದಿಂದ ಬಂದಿದ್ದಕ್ಕೆ ಸಾರ್ಥಕವಾಯಿತು. ನಾವು ರೈತರ ಮಕ್ಕಳು ಎನ್ನುವುದಕ್ಕೆ ಹೆಮ್ಮಯಾಗುತ್ತದೆ. ಚಿನ್ನದ ಪದಕ ಬರುತ್ತೆ ಅಂತ ಕನಸಿನಲ್ಲಿಯೂ ಎಣೆಸಿರಲಿಲ್ಲ. ಇದಕ್ಕೆಲ್ಲಾ ಕಾರಣ ಅಪ್ಪ, ಅಮ್ಮ, ಗುರುಗಳ ಆಶೀರ್ವಾದಿಂದ ಇಂದು ಸಮಾಜಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದಿದ್ದೇವೆ ಎಂದು ಅರಸೀಕೆರೆ ತಾಲೂಕಿನ ಕಣಕಟ್ಟೆಯ ಲಕ್ಷ್ಮೀಶ ಮತ್ತು ಎರಡನೇ ರ್ಯಾಂಕ್ ಪಡೆದ ಅರಕಲಗೂಡು ತಾಲೂಕಿನ ಬೆಳಗುಲಿ ಗ್ರಾಮದ ಮೇಘನಾಳ ಮಾತು.

ಒಟ್ಟಾರೆ, ನಗರ ಪ್ರದೇಶದ ಮಕ್ಕಳಿಗಿಂತ ನಾವೇನು ಕಡಿಮೆಯಿಲ್ಲ ಎಂಬಂತೆ ಮೊದಲ ಬಾರಿಗೆ ನಡೆದ ಗ್ರಾಜ್ಯುಯೇಷನ್ ಡೇ ನಲ್ಲಿ ಹಳ್ಳಿಯ ಕೃಷಿಕರ ಮಕ್ಕಳ ಸಾಧನೆ ನೋಡಿದ ಸಿಟಿ ಮಕ್ಕಳ ಪೋಷಕರ ಹುಬ್ಬೇರುವಂತೆ ಮಾಡಿದ್ದು ಸತ್ಯ.

ABOUT THE AUTHOR

...view details