ಕರ್ನಾಟಕ

karnataka

ETV Bharat / state

ಚನ್ನರಾಯಪಟ್ಟಣದಲ್ಲಿ ಕೊಬ್ಬರಿ ಹರಾಜು ಆರಂಭಿಸುತ್ತೇವೆ: ಶಾಸಕ ಬಾಲಕೃಷ್ಣ ಭರವಸೆ - Agricultural Product Market in Channarayapatnam

ತೆಂಗು ಬೆಳೆಗಾರರಿಗೆ ಪಾರದರ್ಶಕ ಬೆಲೆ ದೊರಕಿಸಿಕೊಡುವ ಉದ್ದೇಶದೊಂದಿಗೆ 2020ರ ಜನವರಿಯಿಂದ ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಹರಾಜು ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ರೈತರಿಗೆ ಭರವಸೆ ನೀಡಿದ್ದಾರೆ.

ಶಾಸಕ ಸಿ.ಎನ್.ಬಾಲಕೃಷ್ಣ

By

Published : Nov 10, 2019, 10:55 AM IST

ಹಾಸನ:ತೆಂಗು ಬೆಳೆಗಾರರಿಗೆ ಪಾರದರ್ಶಕ ಬೆಲೆ ದೊರಕಿಸಿಕೊಡುವ ಉದ್ದೇಶದೊಂದಿಗೆ 2020ರ ಜನವರಿಯಿಂದ ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಹರಾಜು ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ರೈತರಿಗೆ ಭರವಸೆ ನೀಡಿದ್ದಾರೆ.

ಚನ್ನರಾಯಪಟ್ಟಣದದಲ್ಲಿ ಕೊಬ್ಬರಿ ಹರಾಜು ಆರಂಭಿಸುತ್ತೇವೆ: ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ

ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮಾತನಾಡಿದ ಅವರು, 2018-19ನೇ ವಾರ್ಷಿಕ ಕ್ರಿಯಾ ಯೋಜನೆಯಡಿಯಲ್ಲಿ 1.80 ಕೋಟಿ ರೂ.ಗಳಲ್ಲಿ ಹೊಸದಾಗಿ ಎರಡು ತರಕಾರಿ ಮಾರುಕಟ್ಟೆ ಪ್ರಾಂಗಣ, 1.19 ಕೋಟಿ ರೂ. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆಯ ನೆಲಹಾಸು, ಚರಂಡಿ, ರಸ್ತೆ ನಿರ್ಮಾಣದ ಕಾಮಗಾರಿ ಹಾಗೂ 20 ಲಕ್ಷ ರೂ.ಗಳಲ್ಲಿ ವೇ ಬ್ರಿಡ್ಜ್ ನಿರ್ಮಾಣ, ಗ್ರಾಮೀಣ ಸಂತೆ ನಡೆಯುವ ಜುಟ್ಟನಹಳ್ಳಿಯಲ್ಲಿ 15 ಲಕ್ಷ ರೂ.ನಲ್ಲಿ ಪ್ರಾಂಗಣ ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದರು.

ಇದರೊಂದಿಗೆ ನಬಾರ್ಡ್‌ನ ಅಡಿ 3 ಕೋಟಿ ರೂ. ಕಾಮಗಾರಿ ಮಂಜೂರಾಗಿದೆ. ಪಟ್ಟಣದಲ್ಲಿನ ಮಾರುಕಟ್ಟೆಯಲ್ಲಿ 99 ಲಕ್ಷ ರೂ. ವೆಚ್ಚದಲ್ಲಿ 4 ಮುಚ್ಚಿದ ಹರಾಜು ಕಟ್ಟೆ ನಿರ್ಮಾಣ, ಶ್ರವಣಬೆಳಗೊಳದಲ್ಲಿನ ಉಪ ಮಾರುಕಟ್ಟೆಯಲ್ಲಿ 86 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್​ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗಿದೆ. ಇದಲ್ಲದೇ, ಅವಶ್ಯವಿರುವ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳಲು ಹೆಚ್ಚುವರಿಯಾಗಿ 3 ಕೋಟಿ ಮಂಜೂರಾಗಿದೆ. ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ 9 ಕೋಟಿ ವೆಚ್ಚದ ನಾನಾ ಕಾಮಗಾರಿಗಳು ಪ್ರಗತಿ ಹಂತದಲ್ಲಿರುವುದಾಗಿ ತಿಳಿಸಿದರು.

ಇದೇ ವೇಳೆ ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿ.ಆರ್.ರಂಗಸ್ವಾಮಿ ಅವರನ್ನು ಅಭಿನಂದಿಸಲಾಯಿತು.

ABOUT THE AUTHOR

...view details