ಕರ್ನಾಟಕ

karnataka

ETV Bharat / state

ಸಾಲದ ಮೇಲಿನ ಬಡ್ಡಿ ಸಂಪೂರ್ಣ ಮನ್ನಾ ಎಂದ ಸಿಎಂ.. ಆದರೆ, ಈ ಷರತ್ತು ಅನ್ವಯ? - ಸಿಎಂ ಯಡಿಯೂರಪ್ಪ

ಈ ಬಾರಿ ರೈತರು ಮಾಡಿರುವ ಸಾಲದ ಅಸಲು ಹಣವನ್ನು ಮಾರ್ಚ್ 31ರೊಳಗೆ ಪಾವತಿಸಿದರೆ ಅದರ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡುವೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದರು.

Waiver of Interest on Loan
ಸಾಲದ ಮೇಲಿನ ಬಡ್ಡಿ ಸಂಪೂರ್ಣ ಮನ್ನಾ ಸಿಎಂ ಘೋಷಣೆ..!

By

Published : Feb 10, 2020, 3:30 AM IST

ಹಾಸನ: ರೈತರು ಮಾಡಿರುವ ಅಲ್ಪಾವಧಿ, ದೀರ್ಘಾವಧಿ ಹಾಗೂ ಕೃಷಿ ಉಪಕರಣಗಳ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದರು.

9 ದಿನಗಳಿಂದ ನಡೆದ ತರಳುಬಾಳು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಾ, ಬಜೆಟ್​ನಲ್ಲಿ ನಾನು ಈ ಬಾರಿ ರೈತರ ಮಾಡಿರುವ ಸಾಲದ ಅಸಲು ಹಣವನ್ನು ಮಾರ್ಚ್ 31ರೊಳಗೆ ಪಾವತಿಸಿದರೆ ಅದರ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡುವೆ ಎಂದು ಹೇಳಿದರು.

ರಾಜ್ಯದ ಜನತೆಗೆ ಉದ್ಯೋಗ ಕಲ್ಪಿಸುವ ನಿರಾಶ್ರಿತರಿಗೆ ಮನೆ ಕಟ್ಟಿಕೊಡುವ ಹಾಗೂ ಬಡ ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡುವ ವ್ಯವಸ್ಥೆಯನ್ನು ಮಾಡುವಂತೆ ನಮ್ಮ ಸರ್ಕಾರ ದಾಪುಗಾಲಿಟ್ಟಿದೆ. ಕೆಲವೊಂದು ಸಮಸ್ಯೆಗಳಿಗೆ ಈಗಾಗಲೇ ಪರಿಹಾರ ಸಿಕ್ಕಿದೆ. ರೈತರ ಬಾಳನ್ನು ಹಸನು ಮಾಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಸಾಲದ ಮೇಲಿನ ಬಡ್ಡಿ ಸಂಪೂರ್ಣ ಮನ್ನಾ ಸಿಎಂ ಘೋಷಣೆ..!

ಹಳೆಬೀಡು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಏರಿಸುವ ಪ್ರಸ್ತಾಪವನ್ನು ಸದ್ಯದಲ್ಲಿಯೇ ಈಡೇರಿಸುತ್ತೇನೆ. ನನ್ನ ಮೂರು ವರ್ಷದ ಮುಂದಿನ ಆಡಳಿತ ಅವಧಿಯಲ್ಲಿ ನೀರಾವರಿ ಯೋಜನೆಗೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ. ಹಣದ ಸಮಸ್ಯೆ ಇದ್ದರೂ ಮುಂದಿನ ಬಜೆಟ್ ಒಳಗಡೆ ಕೊಡಿಸಿ, ಮುಂದಿನ ವರ್ಷ ರಾಜ್ಯದ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಇನ್ನು, ಮಾನವರ ನಡುವೆ ತಾರತಮ್ಯವಿಲ್ಲದೆ ಆಚರಿಸುವಂತಹ ಉಣ್ಣಿಮೆ ಹಬ್ಬ ಎಂದರೆ ಅದು ತರಳುಬಾಳು ಮಹೋತ್ಸವ. ನಾಡಿನ ಜನ ನಾಡಹಬ್ಬದಂತೆ ಆಚರಿಸಲಿದ್ದಾರೆ. ಮಠದಿಂದ ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ಮಾಡಲಾಗುತ್ತಿದೆ. ಮಠವನ್ನು ನಂಬಿ ಬರುವಂತಹ ನೊಂದವರಿಗೆ ಕೇವಲ ಭರವಸೆಗಳನ್ನು ನೀಡದೆ ಕಾರ್ಯರೂಪ ಮಾಡುವಂತಹ ಕೆಲಸವನ್ನು ಮಠ ಮಾಡಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿರುವ ಮಠ, ಮುಂದಿನ ದಿನಗಳಲ್ಲಿ ಮತ್ತಷ್ಟು ನೊಂದವರ ಪಾಲಿನ ಆಶಾಕಿರಣ ಆಗಲಿ ಎಂದು ಹಾರೈಸಿದರು.

ABOUT THE AUTHOR

...view details