ಹಾಸನ (ಹಳೇಬೀಡು):ನಾನು ಗೃಹ ಮಂತ್ರಿಯಾಗಿದ್ದಾಗ 18 ಮಂದಿ ಸ್ಲೀಪರ್ ಸೇಲ್ ಗಳನ್ನ ಬಿಹಾರ್ ಜೈಲಿಗೆ ಕಳಿಸಿದ್ದೆ. ಪಕ್ಕದ ರಾಜ್ಯ ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿ ಹಲವಾರು ಜನ ಟ್ರೈನಿಂಗ್ ತಗೊಳ್ಳೋದು ಬರೋದು ನಿರಂತರವಾಗಿ ನಡೆಯುತ್ತಿರುವ ಒಂದು ಪ್ರಕ್ರಿಯಾಗಿದೆ. ಅಂತಹ ಚಟುವಟಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಅವಕಾಶ ಕೊಟ್ಟಿಲ್ಲ ಅಂತ ಸಿಎಂ ಬಸವರಾಜ್ ಬೊಮ್ಮಾಯಿ ಮಂಗಳೂರು ಬ್ಲಾಸ್ಟ್ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದರು.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡಿನ ಪುಷ್ಪಗಿರಿ ಮಠಕ್ಕೆ ಭೇಟಿ ಕೊಟ್ಟ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಲೀಪರ್ ಸೆಲ್ ಬಹುತೇಕ ಕರಾವಳಿ ಪ್ರದೇಶದಲ್ಲಿ ಆಕ್ಟಿವ್ ಆಗಿರುವುದನ್ನು ಗಮನಿಸಿದ್ದೇನೆ. ಶಿರಸಿ ಭಟ್ಕಳ ಆ ಭಾಗದಿಂದ ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿದ್ದ ಅಂತಹ ವ್ಯಕ್ತಿಗಳನ್ನು ವಶಕ್ಕೆ ಪಡೆದು, ಬಿಹಾರ್ ಜೈಲಿಗೆ ಕಳುಹಿಸಿದ್ದೇವೆ.
ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ: ಗೃಹಮಂತ್ರಿಯಾಗಿದ್ದಾಗ ಎಲ್ಲಾ ದಕ್ಷಿಣ ಭಾರತದ ಡಿಜಿಗಳಿಗೆ ಕರೆ ಕೊಟ್ಟಿದ್ದೆ. ಬಹಳಷ್ಟು ಜನ ಕೃತ್ಯವನ್ನು ಮಾಡಿ ಬಾರ್ಡರ್ ಕ್ರಾಸ್ ಮಾಡಿ ಬೇರೆ ರಾಜ್ಯಕ್ಕೆ ಹೋಗ್ತಾರೆ. ಅಲ್ಲಿ ಟ್ರೈನಿಂಗ್ ತಗೊಂಡು ಇಲ್ಲಿಗೆ ಬರ್ತಾರೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಒಗ್ಗಟ್ಟಾಗಿ ಒಂದು ಗುಪ್ತಚರ ಮಾಹಿತಿ ಶೇರ್ ಮಾಡಬೇಕು. ಅಲ್ಲಿರುವಂತಹ ಆ್ಯಂಟಿ ಟೆರರಿಸ್ಟ್ ಆಕ್ಟಿವಿಟೀಸ್ಗಳನ್ನ ಶೇರ್ ಮಾಡಿ ಎಫರ್ಟ್ ಮಾಡಿದ್ರೆ ಬಹಳಷ್ಟು ನಿಯಂತ್ರಣ ಮಾಡಲು ಸಾಧ್ಯ. ಈ ವಿಚಾರವಾಗಿ ನಾನು ನನ್ನ ಮುಂದಿನ ದಿನಗಳಲ್ಲಿ ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆಯುತ್ತೇನೆ ಎಂದರು.
ಗುಪ್ತಚರ ವೈಫಲ್ಯ ಇಲ್ಲ:ಮಂಗಳೂರು ಬ್ಲಾಸ್ಟ್ ಪ್ರಕರಣದ ಹಿನ್ನೆಲೆ ಗುಪ್ತಚರ ಇಲಾಖೆಯ ವೈಫಲ್ಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಇಲ್ಲಿ ಗುಪ್ತಚರ ವೈಫಲ್ಯ ಎಂಬ ಪ್ರಶ್ನೆ ಇಲ್ಲ. ಈ ಘಟನೆಗಳು ಎಲ್ಲಾ ಕಾಲದಲ್ಲಿಯೂ ನಡೆದಿದೆ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋಟಿವೇಟೆಡ್ ಆಗಿರುವಂಥದ್ದು, ಇಲ್ಲಿನ ಸ್ಥಳೀಯರಿಗಿಂತ ಈಗ ಬಹಳಷ್ಟು ಜನ ಬಾಂಗ್ಲಾದೇಶದಿಂದ ರಾಜ್ಯಕ್ಕೆ ಬಂದಿದ್ದು, ಅಂತಹ ವ್ಯಕ್ತಿಗಳನ್ನ ಗುರುತಿಸಿ ಬಾರ್ಡರ್ಗೆ ಬಿಟ್ಟು ಬರುವಂತಹ ಕೆಲಸ ಮಾಡುತ್ತಿದ್ದೇವೆ.