ಕರ್ನಾಟಕ

karnataka

ETV Bharat / state

ವರ್ಗ ಸೃಷ್ಠಿ ಎಂಬುದು ಜಾತಿ ಸೃಷ್ಠಿಗಿಂತ ಅಪಾಯಕಾರಿ;  ಸಚಿವ ಮಾಧುಸ್ವಾಮಿ - ಪಾರ್ಲಿಮೆಂಟ್ ಚುನಾವಣೆ

ಮಠಗಳು ಯಾವ ಹಣದ ಹಿಂದೆ ಹೋಗಬಾರದು, ವರ್ಗ ಸೃಷ್ಠಿ ಎಂಬುದು ಜಾತಿ ಸೃಷ್ಠಿಗಿಂತ ಅಪಾಯಕಾರಿಯಾಗಿದೆ ಎಂದು ವೀರಶೈವ-ಲಿಂಗಾಯಿತರಿಗೆ ಸಚಿವ ಮಾಧುಸ್ವಾಮಿ ಸಲಹೆ ನೀಡಿದ್ದಾರೆ.

ಮಾಧುಸ್ವಾಮಿ

By

Published : Sep 13, 2019, 5:01 AM IST

ಹಾಸನ;ಮಠಗಳು ಯಾವ ಹಣದ ಹಿಂದೆ ಹೋಗಬಾರದು ಮತ್ತು ವರ್ಗ ಸೃಷ್ಠಿ ಎಂಬುದು ಜಾತಿ ಸೃಷ್ಠಿಗಿಂತ ಅಪಾಯಕಾರಿಯಾಗಿದೆ ಎಂದು ವೀರಶೈವ-ಲಿಂಗಾಯಿತರಿಗೆ ಸಚಿವ ಮಾಧುಸ್ವಾಮಿ ಸಲಹೆ ನೀಡಿದ್ದಾರೆ.

ನಗರದ ಅರಳೇಪೇಟೆ ಬಳಿ ಇರುವ ಶ್ರೀ ಬಸವೇಶ್ವರ ಕಲ್ಯಾಣ ಮಂದಿರದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮಾರಂಭದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಮನೆಯಲ್ಲಿ ಬೇಸರವಾದರೇ ಮಠಕ್ಕೆ ಹೋಗುತ್ತಾರೆ. ಮಠ ಮತ್ತು ಮನೆ ಎರಡನ್ನು ನೆನೆಪಿಟ್ಟುಕೊಳ್ಳಬೇಕು ಎಂದರು. ಮಠ ಯಾರ ಸ್ವಂತ ಸ್ವತ್ತಲ್ಲ. ಮಠದ ಧರ್ಮಕ್ಕೆ ಬೆನ್ನಲುಬಾಗಿ ನಾವುಗಳು ನಿಲ್ಲಬೇಕು ಎಂದರು.

ಮಾಧುಸ್ವಾಮಿ ಮಾತನಾಡಿದ್ದಾರೆ

ವೀರಶೈವ-ಲಿಂಗಾಯಿತ ಎಂದು ಮಾತನಾಡುವ ಅಧಿಕಾರ ನಮಗೆ ಕೊಟ್ಟಿಲ್ಲ. ಅದು ಧರ್ಮವಾಗಿದ್ದು, ಜಾತಿ ಅಲ್ಲವೇ ಅಲ್ಲ. ಯಾರಾದರೂ ನಾನು ಶ್ರೇಷ್ಟ ಎಂದು ಜಾತಿ ಬಗ್ಗೆ ಮಾತನಾಡಿದರೇ ಆತನು ಯಾವ ಸಾಧನೆ ಮಾಡಲು ಸಾಧ್ಯವಿಲ್ಲ. ಹುಟ್ಟು ಆಕಸ್ಮಿಕ, ಜನ್ಮ ತಾಳಿದ ಮೇಲೆ ಅದರ ಗೌರವ ಕಾಪಾಡಿಕೊಳ್ಳಬೇಕು. ನಮ್ಮ ಬಗ್ಗೆ ಜನರು ಒಳ್ಳೆ ಮಾತನಾಡುವ ವಾತಾವರಣ ನಿರ್ಮಾಣ ಮಾಡುವ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.

ಏನೇ ಗೊಂದಲ ಇದ್ದರೂ ಚರ್ಚೆ ಮಾಡಿ ಬಗೆಹರಿಸಿಕೊಳ್ಳೋಣ. ಸುಮ್ಮನೆ ವಾದಿಗಳಾಗುವುದು ಬೇಡ. ವರ್ಗ ಸೃಷ್ಠಿ ಎಂಬುದು ಜಾತಿ ಸೃಷ್ಠಿಗಿಂತ ಅಪಾಯ. ಶ್ರೀಮಂತರ ವರ್ಗ, ಬಡವರ ವರ್ಗ, ಕಾರ್ಮಿಕರ ವರ್ಗ, ಮಧ್ಯಮ ವರ್ಗ, ಸಾಮಾನ್ಯ ಜನಗಳ ವರ್ಗ ಎಂಬ ಈ ಸೃಷ್ಠಿಯನ್ನು ನಾವು ಮಾಡಿದರೇ ಅಂದೇ ದೊಡ್ಡ ಅಪಚಾರ ಮಾಡಿದಂತಾಗುತ್ತದೆ. ಧಾರ್ಮಿಕ ಸಂಘಟನೆಗಳಲ್ಲಿ ವರ್ಗ ಸೃಷ್ಠಿಯಾಗುವುದು ಒಳ್ಳೆಯದಲ್ಲ ಎಂದರು.

ಈಗಾಗಲೇ ಕರ್ನಾಟಕದಲ್ಲಿ ಒಂದು ಇತಿಹಾಸ ನಿರ್ಮಾಣವಾಗಿದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ 25 ಮತ್ತು 1 ಸೀಟು ಸೇರಿ 26 ಸೀಟುಗಳು ಜನರಿಂದ ಸಿಕ್ಕಿದೆ. ಆ ವಿಶ್ವಾಸವನ್ನು ನಾವುಗಳು ಉಳಿಸಿಕೊಳ್ಳಲೇಬೇಕು ಎನ್ನುವ ನಿಟ್ಟಿನಲ್ಲಿ ಶ್ರಮಪಡುತ್ತಿದ್ದೇವೆ ಎಂದರು.

ABOUT THE AUTHOR

...view details