ಕರ್ನಾಟಕ

karnataka

ETV Bharat / state

ರಸ್ತೆ ಬದಿ ಕಸ ಹಾಕಬೇಡಿ ಅಂದರೂ ಕೇಳಲಿಲ್ಲ: ಅಂಗಡಿ ಮಾಲೀಕರಿಗೆ ಬುದ್ಧಿ ಕಲಿಸಿದ ಪೌರ ಕಾರ್ಮಿಕರು - hassan Mobile Shop News

ಕಸ ಹಾಕಬೇಡಿ ಎಂದರೂ ಕಸ ಹಾಕುತ್ತಿದ್ದ ಮೊಬೈಲ್​ ಅಂಗಡಿ ಸಿಬ್ಬಂದಿಗೆ ಬುದ್ಧಿ ಕಲಿಸಲು ಮತ್ತೆ ಅಂಗಡಿ ಮುಂದೆ ಕಸ ತಂದು ಹಾಕುವ ಮೂಲಕ ಪೌರಕಾರ್ಮಿಕರು ಬಿಸಿ ಮುಟ್ಟಿಸಿದ್ದಾರೆ.

ಅಂಗಡಿ ಮುಂದೆ ಕಸ ಹಾಕುತ್ತಿರುವ ಪೌರ ಕಾರ್ಮಿಕರು
ಅಂಗಡಿ ಮುಂದೆ ಕಸ ಹಾಕುತ್ತಿರುವ ಪೌರ ಕಾರ್ಮಿಕರು

By

Published : Oct 21, 2020, 5:44 PM IST

ಹಾಸನ: ರಸ್ತೆ ಬದಿ ಕಸ ಹಾಕದಂತೆ ಅನೇಕ ಬಾರಿ ಸೂಚನೆ ನೀಡಿದರೂ ಲೆಕ್ಕಿಸದವರಿಗೆ ಬುದ್ದಿ ಕಲಿಸಲು ಮುಂದಾದ ಪೌರಕಾರ್ಮಿಕರು ಕಸವನ್ನು ಅಂಗಡಿ ಮುಂದೆ ಮತ್ತೆ ತಂದು ಹಾಕಿದ್ದಾರೆ.

ನಗರದ 7ನೇ ವಾರ್ಡ್​​​ನ ಬಸಟ್ಟಿಕೊಪ್ಪಲು ಮುಖ್ಯ ರಸ್ತೆಯ ಬದಿಯಲ್ಲೇ ಮೊಬೈಲ್ ಅಂಗಡಿಯವರು ಕಸವನ್ನು ಹಾಕುತ್ತಿದ್ದರು. ಈ ಬಗ್ಗೆ ನಗರಸಭೆ ಸಿಬ್ಬಂದಿ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಮಾತಿಗೂ ಗಮನ ಕೊಡದೇ ಅದೇ ರೀತಿ ಕಸ ಸುರಿಯುತ್ತಿದ್ದರು. ಬುಧವಾರ ಕಸ ಎತ್ತುವ ಟ್ರ್ಯಾಕ್ಟರ್ ಬಂದಾಗ ಕಸ ರಸ್ತೆ ಬದಿಯಲ್ಲೇ ಇರುವುದನ್ನು ಕಂಡು ಕೋಪಗೊಂಡ ಪೌರ ಕಾರ್ಮಿಕರು ಅಂಗಡಿ ಮುಂದೆಯೇ ಕಸ ಸುರಿಯುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಅಂಗಡಿ ಮುಂದೆ ಕಸ ಹಾಕುತ್ತಿರುವ ಪೌರ ಕಾರ್ಮಿಕರು

ಮತ್ತೆ ಇದೇ ರೀತಿ ರಸ್ತೆ ಬದಿ ಕಸ ಹಾಕದಂತೆ ಎಚ್ಚರಿಕೆ ನೀಡಿದ್ದು, ಇಲ್ಲಿನ ಅಂಗಡಿ ಮಾಲೀಕರು ಹಾಗೂ ನಿವಾಸಿಗಳಿಗೂ ಎಚ್ಚರಿಕೆ ನೀಡಲಾಗಿದೆ. ನಿತ್ಯ ವಾರ್ಡ್​ಗೆ ಬರುವ ನಗರಸಭೆ ಕಸದ ವಾಹನಕ್ಕೆ ಕಸ ಹಾಕುವಂತೆ ಕಿವಿಮಾತು ಹೇಳಿದ್ದಾರೆ.

ABOUT THE AUTHOR

...view details