ಹಾಸನ: ವೃದ್ಧೆ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಶನಿವಾರ ಮುಂಜಾನೆ 4 ಗಂಟೆಗೆ ನಡೆದಿದೆ.
ರಂಗಮ್ಮ (70) ಎಂಬುವರು ಚಿರತೆ ದಾಳಿಯಿಂದ ಗಾಯಗೊಂಡಿದ್ದಾರೆ. ರಂಗಮ್ಮನ ತಲೆ ಸೇರಿದಂತೆ ದೇಹದ ಭಾಗಗಳ ಮೇಲೆ ತೀವ್ರ ಗಾಯಗಳಾಗಿವೆ. ತಲೆಗೆ 28 ಹೊಲಿಗೆ ಹಾಕಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರ ಬಂದ ರಂಗಮ್ಮನ ಮೇಲೆ ದಾಳಿ ನಡೆಸಿದಾಗ ತಲೆ ಭಾಗಕ್ಕೆ ಕಾಲಿನಿಂದ ಪರಚಿದೆ. ರಂಗಮ್ಮ ಕಿರುಚಾಡಿದಾಗ, ಮೊಮ್ಮಗಳು ಹೊರಗೆ ಬಂದಿದ್ದಾಳೆ. ನಂತರ ಮಗ ಚಿರತೆ ಕಣ್ಣಿನ ಮೇಲೆ ಬಟ್ಟೆಹಾಕಿ ಅದನ್ನು ಬೇರೆಡೆ ಎಸೆದು, ತಾಯಿಯನ್ನು ರಕ್ಷಿಸಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ.
ವೃದ್ಧೆ ಮೇಲೆ ಚಿರತೆ ದಾಳಿ.. ಗಾಯಾಳುವಿನ ತಲೆಗೆ 28 ಹೊಲಿಗೆ ಇದೇ ಚಿರತೆ ನಾಲ್ಕೈದು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಗ್ರಾಮದ ಜನರು ಜಮೀನುಗಳಿಗೆ ತೆರಳಲು ಭಯಭೀತರಾಗಿದ್ದಾರೆ. ನಾಗನಹಳ್ಳಿ ಪಕ್ಕದಲ್ಲಿರುವ ಕಲ್ಲು ಗುಡುಗನಹಳ್ಳಿಯಲ್ಲಿ ಗ್ರಾನೈಟ್ ಕಲ್ಲುಗಳನ್ನು ತೆಗೆದು ಗುಂಡಿಯನ್ನು ಮಾಡಿದ್ದಾರೆ. ಅದರಿಂದ ಪ್ರಾಣಿಗಳಿಗೆ ವಾಸಲು ಯೋಗ್ಯವಾಗಿದೆ. ಹೀಗಾಗಿ ಗ್ರಾನೆಟ್ ಕ್ವಾರಿಯನ್ನು ನಿಲ್ಲಿಸಬೇಕು. ಅರಣ್ಯ ಅಧಿಕಾರಿಗಳು ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಸಿದರು.