ಹಾಸನ/ಸಕಲೇಶಪುರ: ಹಾಡಹಗಲೇ ದುಷ್ಕರ್ಮಿಗಳು ಅಂಗಡಿಯೊಂದಕ್ಕೆ ನುಗ್ಗಿ, ವೃದ್ದೆಯೋರ್ವರ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿರುವ ಘಟನೆ, ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
ನಗರದ ಲಕ್ಷ್ಮೀಪುರಂ ಬಡಾವಣೆಯ ನಿವಾಸಿ ಯಶೋಧ (60) ಮಾಂಗಲ್ಯ ಸರ ಕಳೆದುಕೊಂಡವರು. ಇವರ ದಿನಸಿ ಅಂಗಡಿ ಅಂಗಡಿಗೆ ವ್ಯಾಪಾರ ಮಾಡುವ ನೆಪದಲ್ಲಿ ಬಂದ ಮೂವರು, 60 ರೂ.ವ್ಯಾಪಾರ ಮಾಡಿ ಚಿಲ್ಲರೆ ಹಣ ವಾಪಸ್ ಪಡೆಯುವ ವೇಳೆ ಯಶೋಧರವರ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾರೆ.