ಹಾಸನ:ಖಾಸಗಿ ಶಾಲಾ ವಾಹನಕ್ಕೆ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಮಕ್ಕಳಿಗೆ ಚಿಕ್ಕ, ಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಮರ್ಕುಲಿ ಗ್ರಾಮದ ಸಮೀಪ ನಡೆದಿದೆ. ಹಾಸನ ತಾಲೂಕು ಶಾಂತಿಗ್ರಾಮ ಹೋಬಳಿ ಹಲಸಿನಹಳ್ಳಿ ಗ್ರಾಮದಿಂದ ಶಾಲಾ ಮಕ್ಕಳನ್ನು ಕರೆದುಕೊಂಡು ತೆರಣ್ಯದಲ್ಲಿರುವ ಗ್ರೀನ್ ಅರ್ಥ ಇಂಟರ್ನ್ಯಾಷನಲ್ ಶಾಲೆಗೆ ಹೋಗುವಾಗ ಇಂತಹುದೊಂದು ಘಟನೆ ಶುಕ್ರವಾರ ಭವಿಸಿದೆ.
ಶಾಲಾ ವಾಹನಕ್ಕೆ ಲಾರಿ ಡಿಕ್ಕಿ: ಪ್ರಣಾಪಾಯದಿಂದ ಮಕ್ಕಳು ಪಾರು! - hasan
ಖಾಸಗಿ ಶಾಲಾ ವಾಹನಕ್ಕೆ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಮಕ್ಕಳಿಗೆ ಚಿಕ್ಕ, ಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಮರ್ಕುಲಿ ಗ್ರಾಮದ ಸಮೀಪ ನಡೆದಿದೆ.
ಶಾಲಾ ವಾಹನಕ್ಕೆ ಲಾರಿ ಡಿಕ್ಕಿ ಪ್ರಣಪಾಯದಿಂದ ಮಕ್ಕಳು ಪಾರು
ಹಲಸಿನಹಳ್ಳಿ - ಮರ್ಕುಲಿಯ ಕ್ರಾಸ್ ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಾಹನದಲ್ಲಿದ್ದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಶಾಂತಿಗ್ರಾಮ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಸಿ ಪ್ರಕರಣ ದಾಖಲಿಸಿದ್ದಾರೆ.