ಕರ್ನಾಟಕ

karnataka

ETV Bharat / state

ಚೆಕ್ ಬೌನ್ಸ್ ಪ್ರಕರಣದಲ್ಲಿ ತಪ್ಪೊಪ್ಪಿಗೆ: ನಟ ನಿನಾಸಂ ಅಶ್ವಥ್ ಬಿಡುಗಡೆ - ನಟ ನಿನಾಸಂ ಅಶ್ವಥ್

ಚೆಕ್​ ಬೌನ್ಸ್​ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟ ನಿನಾಸಂ ಅಶ್ವಥ್​ ಅವರು ಬಿಡುಗಡೆಯಾಗಿದ್ದಾರೆ.

check-bounce-case-film-actor-ninasam-ashwath-released
ಚೆಕ್ ಬೌನ್ಸ್ ಪ್ರಕರಣ: ಬಂಧನಕ್ಕೊಳಗಾಗಿದ್ದ ಚಲನಚಿತ್ರ ನಟ ನಿನಾಸಂ ಅಶ್ವಥ್ ಬಿಡುಗಡೆ

By

Published : Jul 10, 2023, 1:13 PM IST

Updated : Jul 10, 2023, 1:25 PM IST

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ.

ಹಾಸನ : ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕನ್ನಡ ಚಿತ್ರನಟ ನಿನಾಸಂ ಅಶ್ವಥ್ ಅವರು ಬಿಡುಗಡೆಗೊಂಡಿದ್ದಾರೆ. ಭಾನುವಾರ ಅಶ್ವಥ್ ಅವರನ್ನು ಹಾಸನ ಬಡಾವಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಶೇ. 25ರಷ್ಟು ಹಣ ಪಾವತಿ ಮಾಡಿದ ಬಳಿಕ ಅವರನ್ನು ರಿಲೀಸ್ ಮಾಡಲಾಗಿದೆ.

ಪ್ರಕರಣವೇನು?: ಅಶ್ವಥ್​ ಅವರು ಹಾಸನ ಮೂಲದ ರೋಹಿತ್ (ರೂಪೇಶ್​)​ ಎಂಬವರಿಂದ ಹಸುಗಳನ್ನು ಖರೀದಿಸಿದ್ದರು. ಅವರಿಗೆ 1.50 ಲಕ್ಷ ರೂಪಾಯಿ ಮೌಲ್ಯದ ಚೆಕ್​ ನೀಡಿದ್ದರು. ಈ ಚೆಕ್ ಅನ್ನು ಬ್ಯಾಂಕ್‌ಗೆ​ ನೀಡಿದಾಗ ಬೌನ್ಸ್​ ಆಗಿತ್ತು. ಈ ಸಂಬಂಧ ರೂಪೇಶ್​ ಹಾಸನದ ಜೆಎಮ್‌ಎಫ್‌ಸಿ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಪ್ರತಿಕ್ರಿಯಿಸಿ​, "ಚೆಕ್ ಬೌನ್ಸ್ ಪ್ರಕರಣದಲ್ಲಿ ನಟ ಅಶ್ವಥ್ ಅವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಸನ ಪೊಲೀಸರು ಹಾಜರುಪಡಿಸಿದ್ದರು. ಎರಡು ವರ್ಷಗಳ ಹಿಂದೆ​ ಹಾಸನದ ರೋಹಿತ್ ಎಂಬವರಿಂದ ಅಶ್ವಥ್ ಹಸುಗಳನ್ನು ಖರೀದಿಸಿ ಅವರಿಗೆ 1 ಲಕ್ಷ 50 ಸಾವಿರ ರೂಗಳ ಚೆಕ್ ನೀಡಿದ್ದರು. ರೋಹಿತ್ ಆ ಚೆಕ್​ ಅನ್ನು ಬ್ಯಾಂಕ್‌ಗೆ ನೀಡಿದಾಗ ಬೌನ್ಸ್ ಆಗಿದೆ. ಹಾಸನದ ಜೆಎಮ್‌ಎಫ್‌ಸಿ ಕೋರ್ಟ್‌ನಲ್ಲಿ ರೋಹಿತ್ ಪ್ರಕರಣ ದಾಖಲಿಸಿದ್ದರು. ಅಶ್ವಥ್ ವಿರುದ್ಧ ನ್ಯಾಯಾಲಯವು ನಾಲ್ಕು ಬಾರಿ ಅರೆಸ್ಟ್ ವಾರೆಂಟ್ ಹೊರಡಿಸಿದ್ದರೂ ನಾಲ್ಕೂ ಬಾರಿಯೂ ಕೋರ್ಟ್‌ಗೆ ಹಾಜರಾಗದೇ ತಪ್ಪಿಸಿಕೊಂಡಿದ್ದರು. ಐದನೇ ಬಾರಿ ಅರೆಸ್ಟ್ ವಾರೆಂಟ್ ಬಂದ ಹಿನ್ನಲೆಯಲ್ಲಿ ಹಾಸನ ಬಡಾವಣೆ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಹಸುಗಳ ಖರೀದಿ ಬಗ್ಗೆ ನ್ಯಾಯಾಧೀಶರ ಮುಂದೆ ಅವರು ತಪ್ಪೊಪ್ಪಿಕೊಂಡಿದ್ದು ಶೇ.25ರಷ್ಟು ಹಣ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಅಶ್ವಥ್ ಶೇ. 25ರಷ್ಟು ಹಣ ಪಾವತಿ ಮಾಡಿದ್ದು, ಉಳಿದ ಹಣ ಪಾವತಿ ಮಾಡುವುದಾಗಿ ಹೇಳಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ" ಎಂದು ಮಾಹಿತಿ ನೀಡಿದರು.

ಅಶ್ವಥ್​ ಅವರು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪೂಜಾ ಗಾಂಧಿ ಅಭಿನಯದ ಮುಂಗಾರು ಮಳೆ ಚಲನಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದರು. ಇದರ ಹೊರತಾಗಿ, ಹಲವು ಚಲನಚಿತ್ರ ಮತ್ತು ಧಾರಾವಾಹಿಗಳಲ್ಲೂ ನಟಿಸಿ ಗಮನ ಸೆಳೆದಿದ್ದರು.

ಇದನ್ನೂ ಓದಿ :ಬೆಂಗಳೂರು: ಮಸೀದಿಗೆ ಚಂದಾ ಕೇಳಲು ಬಂದು ಹುಸಿ ಬಾಂಬ್ ಕರೆ ಮಾಡಿದ ಆರೋಪಿ ಸೆರೆ

Last Updated : Jul 10, 2023, 1:25 PM IST

ABOUT THE AUTHOR

...view details