ಹಾಸನ:ಪೇಜಾವರ ಶ್ರೀಗಳು ಕೃಷ್ಣೈಕ್ಯರಾದ ಹಿನ್ನೆಲೆ ದಕ್ಷಿಣ ಕಾಶಿಯ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಮಠಾಧೀಶರಿಗೂ ಸ್ವಾಮೀಜಿಗಳಿಗೂ ಆದರ್ಶಪ್ರಾಯರಾಗಿ ಬಾಳಿದವರು ಪೇಜಾವರ ಶ್ರೀ... ಭಟ್ಟಾರಕ ಸ್ವಾಮೀಜಿ ಸಂತಾಪ - charukeerthi bhattaraka swamiji pays tribute to pejavara sri
ಉಡುಪಿ ಮಠದ ವಿಶ್ವೇಶತೀರ್ಥ ಶ್ರೀಗಳ ನಿಧನಕ್ಕೆ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸಂತಾಪ ಸೂಚಿಸಿದ್ದಾರೆ.
![ಮಠಾಧೀಶರಿಗೂ ಸ್ವಾಮೀಜಿಗಳಿಗೂ ಆದರ್ಶಪ್ರಾಯರಾಗಿ ಬಾಳಿದವರು ಪೇಜಾವರ ಶ್ರೀ... ಭಟ್ಟಾರಕ ಸ್ವಾಮೀಜಿ ಸಂತಾಪ swamiji](https://etvbharatimages.akamaized.net/etvbharat/prod-images/768-512-5532303-thumbnail-3x2-surya.jpg)
ಪೇಜಾವರ ಶ್ರೀಗಳ ಅಂತಿಮ ದರ್ಶನದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪೇಜಾವರ ಶ್ರೀಗಳ ರಾಷ್ಟ್ರಸೇವೆ ,ಸಮಾಜ ಸೇವೆ ಗಣನೀಯವಾಗಿತ್ತು. ರಾಷ್ಟ್ರೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ರು. ಇವರು ಇಂದು ವಿಧಿವಶರಾಗಿರುವುದು ನಮಗೆಲ್ಲರಿಗೂ ದುಃಖ ತಂದಿದೆ. ವೈಯುಕ್ತಿಕವಾಗಿ ನಮಗೂ ಕೂಡ ನೋವಾಗಿದೆ. ಸನಾತನ ಪರಂಪರೆಯಲ್ಲಿ ಅಗ್ರಗಣ್ಯರು.
ಉಡುಪಿಯ ಕೃಷ್ಣ ಮಠದಲ್ಲಿ 5 ಪರ್ಯಾಯಗಳನ್ನು ಯಶಸ್ವಿಯಾಗಿ ಪೂರೈಸಿರುವ ಪೂಜ್ಯರ ಸಾಧನೆಯನ್ನು ಸುವರ್ಣಾಕ್ಷರಗಳಿಂದ ಬರೆಯುವಷ್ಟು ಮಹತ್ವ ಪಡೆದಿದೆ.ಯಾವತ್ತೂ ಕೂಡ ಎಲ್ಲ ಮಠಾಧೀಶರಿಗೂ ಸ್ವಾಮೀಜಿಗಳಿಗೂ ಆದರ್ಶಪ್ರಾಯವಾಗಿ ಬಾಳಿದ್ದಾರೆ. ಅವರನ್ನು ನಾವು ಎಂದೂ ಮರೆಯುವಂತಿಲ್ಲ. ಅವರು ಮಾಡಿರುವ ಎಲ್ಲಾ ಕಾರ್ಯಗಳು ಇತಿಹಾಸ ಪುಟಸೇರುತ್ತವೆ ಎಂಬುದನ್ನು ನಾವು ಘಂಟಾಘೋಷವಾಗಿ ಹೇಳುತ್ತೇವೆ. ಅಂತ ವ್ಯಕ್ತಿತ್ವವುಳ್ಳ ಅವರ ಆತ್ಮಕ್ಕೆ ಶಾಂತಿ ದೊರಕಲಿ ಅಂತ ನಾನು ಭಗವಾನ್ ಬಾಹುಬಲಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದ್ರು.