ಚನ್ನರಾಯಪಟ್ಟಣ :ಜನರ ಬದುಕಿನ ಸುಂದರ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಶೇಖರಿಸುವ, ಫೋಟೋಗ್ರಾಫರ್ಗಳ ಜೀವನ ಕೊರೊನಾ ಹೊಡೆತಕ್ಕೆ ಮುಗ್ಗರಿಸಿದೆ. ಹಲವಾರು ಕನಸುಗಳನ್ನು ಹೊತ್ತು ಫೋಟೋಗ್ರಫಿ ವ್ಯಾಪಾರ ಪ್ರಾರಂಭ ಮಾಡಿದ ಅದೆಷ್ಟೋ ಜನರ ಬದುಕು ಕಳೆದ ನಾಲ್ಕು ತಿಂಗಳಿನಿಂದ ವ್ಯಾಪಾರವಿಲ್ಲದೆ ಬ್ಲಾಕ್ ಅಂಡ್ ವೈಟ್ ಚಿತ್ರಪಟದಂತಾಗಿದೆ.
ಸಾಲ ಮಾಡಿ ಲಕ್ಷಾಂತರ ರೂ. ಬಂಡವಾಳ ಹಾಕಿ ತಂದ ಕ್ಯಾಮೆರಾ ಮತ್ತು ಸ್ಟುಡಿಯೋಗೆ ಲೋನ್ ಕಟ್ಟಲು ಹಣವಿಲ್ಲದೆ ಪರದಾಡುವಂತಾಗಿದೆ. ವರ್ಷದ ಆರು ತಿಂಗಳು ಕೆಲಸ ಮಾಡಿ, ಇನ್ನಾರು ತಿಂಗಳು ಹೇಗಾದರೂ ಕಷ್ಟಪಟ್ಟು ತಂಗಿಯ ಮದುವೆ, ಅಪ್ಪ-ಅಮ್ಮನ ಆರೋಗ್ಯ, ಸಾಲ ತೀರಿಸುವ ಬಯಕೆ ಹೊತ್ತ ಅದೆಷ್ಟೊ ಮನಸ್ಸುಗಳ ಕನಸುಗಳಿಗೆ ಲಾಕ್ಡೌನ್ ತಣ್ಣೀರೆರಚಿದೆ.