ಕರ್ನಾಟಕ

karnataka

ETV Bharat / state

ಕೌಟುಂಬಿಕ ಕಲಹದಿಂದ ಮಗನ ಕೊಲೆಗೆ ಸುಪಾರಿ; ತಂದೆ ಸೇರಿ ಆರು ಆರೋಪಿಗಳ ಬಂಧನ - murder case

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಂದೆಯೇ ಮಗನ ಕೊಲೆಗೆ ಸುಪಾರಿ ಕೊಟ್ಟ ಘಟನೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ತಂದೆ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Channarayapattana murder case; Arrest of six accused along with father
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ

By

Published : Sep 16, 2020, 8:55 PM IST

ಹಾಸನ :ಆಸ್ತಿ ವಿಚಾರ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸುಪಾರಿ ಕೊಟ್ಟು ತನ್ನ ಮಗನನ್ನೇ ಕೊಲೆ ಮಾಡಿಸಿದ ತಂದೆಯನ್ನು ಬಂಧಿಸುವಲ್ಲಿ ಚನ್ನರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಆಗಸ್ಟ್‌ 27 ರಂದು ತಾಲೂಕಿನ ಬೇಡಿಗನಹಳ್ಳಿ ಕೆರೆ ಏರಿ ಮೇಲೆ ರಾತ್ರಿ ಶೂಟೌಟ್ ನಡೆದಿತ್ತು. ​ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

ಕೌಟುಂಬಿಕ ಕಲಹದಿಂದ ಮಗನ ಕೊಲೆಗೆ ಸುಪಾರಿ; ತಂದೆ ಸೇರಿ ಆರು ಆರೋಪಿಗಳ ಬಂಧನ

ತಂದೆ ಹೇಮಂತ್ (45), ಕಾಂತರಾಜು (52), ಸುನೀಲ್( 27), ಪ್ರಶಾಂತ್ (23 ), ನಂದೀಶ್(24) ಮತ್ತು ನಾಗರಾಜು( 65) ಎಂಬುವವರನ್ನು ಬಂಧಿಸಲಾಗಿದ್ದು, ಇವರಿಂದ 1.88 ಲಕ್ಷ ರೂ. ನಗದು, 6 ಬಂದೂಕು, ಒಂದು ಮಾರುತಿ ಓಮಿನಿ, ಮೂರು ಬೈಕ್, ಐದು ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಮಗನ ಕೊಲೆಗೆ ಸುಪಾರಿ ಕೊಟ್ಟ ತಂದೆ:

ಹೇಮಂತ್ ಮತ್ತು ಪುನೀತ್ ತಂದೆ-ಮಗನಾದರೂ ಇಬ್ಬರ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ವೈಷಮ್ಯವಿತ್ತು. ಕೆಲ ವರ್ಷಗಳಿಂದ ಇಬ್ಬರೂ ಬೇರೆ ಬೇರೆ ವಾಸುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ತಂದೆ ಹೇಮಂತ್ ಅವರ ತೋಟದಲ್ಲಿ ಮಗ ಪುನೀತ್ ತೆಂಗಿನಕಾಯಿ ಕೆಡವಿದ್ದನಂತೆ. ಇದರಿಂದ ಹೇಮಂತ್ ಮಗನಿಗೆ ವಾರ್ನಿಂಗ್​ ನೀಡಿದ್ದ ಎಂದು ಪುತ್ರನ ಕೊಲೆಯ ನಂತರ ಆತನ ತಾಯಿ ಯಶೋಧಮ್ಮ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಮಗ ಪುನೀತ್‌ ಕೊಲೆಗೆ ತಂದೆ ಹೇಮಂತ್ ಸುಪಾರಿ ನೀಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿತ್ತು. ಈ ಹಿನ್ನೆಲೆ ತಂದೆ ಹೇಮಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮನಗ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಡಿವೈಎಸ್ಪಿ ಬಿ.ಬಿ ಲಕ್ಷ್ಮೇಗೌಡ, ಸಿಪಿಐ ಬಿ.ಜಿ. ಕುಮಾರ್, ಸಬ್​ಇನ್ಸ್​ಪೆಕ್ಟರ್​ ವಿನೋದ ರಾಜ್, ಪಿಎಸ್ಐ ಶ್ರೀನಿವಾಸ್ ಸೇರಿದಂತೆ ಇತರರನ್ನು ಎಸ್ಪಿ ಶ್ರೀನಿವಾಸ್ ಗೌಡ ಅಭಿನಂದಿಸಿದ್ದಾರೆ.

ABOUT THE AUTHOR

...view details