ಚನ್ನರಾಯಪಟ್ಟಣ(ಹಾಸನ): ಧಾರ್ಮಿಕ ಕಾರ್ಯಗಳಿಂದ ದೇಶ ಉಳಿಯುತ್ತದೆ. ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಹಳ್ಳಿಗಳಿಂದ ಮಾತ್ರ ಸಾಧ್ಯ. ಧರ್ಮ, ಆಧ್ಯಾತ್ಮ, ಸಮಾಜವನ್ನು ಒಂದೇ ಮಾರ್ಗದಲ್ಲಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಯಜ್ಞ ಯಾಗಾದಿಗಳು ಜರುಗುತ್ತಿವೆ. ಯಜ್ಞದ ವಿಗ್ರಹದಲ್ಲಿರುವ ಚೈತನ್ಯಕ್ಕೆ ಪೂಜೆ ಸಲ್ಲಿಸಿದರೆ ಬಾಗಿನ ಕೊಟ್ಟು ಜೀವಂತ ದೇವಿಗೆ ಉಪಾಸನ ಮಾಡಿರುವುದು ವಿಶೇಷವಾಗಿದೆ ಎಂದು ಗೌರಿಗದ್ದೆ ಆಶ್ರಮದ ಸದ್ಗುರು ಶ್ರೀವಿನಯ್ ಗುರೂಜಿ ತಿಳಿಸಿದರು.
ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟ ಗ್ರಾಮದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ನಡೆದ 16ನೇ ವರ್ಷದ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾಯಾಗ ಹಾಗೂ ಮಹಿಳೆಯರಿಗೆ ಬಾಗಿನ ಮತ್ತು ಸೀರೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಆಶ್ರಮದಿಂದ ಮುಂದಿನ ದಿನಗಳಲ್ಲಿ ವಿದ್ಯೆ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವುದಾಗಿ ಆಶ್ರಮದ ಗುರೂಜಿ ತಿಳಿಸಿದ್ದಾರೆ ಹಾಗೂ ಜಿಲ್ಲೆಗೆ ಉತ್ತಮವಾದ ಹೃದಯ ರೋಗಕ್ಕೆ ಸಂಬಂಧಿಸಿದ ಆಸ್ಪತ್ರೆಯನ್ನು ತೆರೆಯಲು ಎಂಎಲ್ಸಿ ಅವರಿಗೆ ತಿಳಿಸಲಾಗಿದೆ ಎಂದರು.