ಕರ್ನಾಟಕ

karnataka

ETV Bharat / state

ಅಮೃತ್​ ಮಹಲ್​ ತಳಿ ರಕ್ಷಣೆಗೆ ಕ್ರಮ ಕೈಗೊಳ್ಳಿ: ಸಿಎಂಗೆ ಗೋಪಾಲಸ್ವಾಮಿ ಮನವಿ

ಸುಮಾರು 500 ವರ್ಷಕ್ಕೂ ಅಧಿಕ ಇತಿಹಾಸವಿರುವ ಅಮೃತ್ ಮಹಲ್‍ ತಳಿಗಳು ರಾಜ್ಯದಲ್ಲಿ 63 ಸ್ಥಳಗಳಲ್ಲಿವೆ. ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್​ ಸದಸ್ಯ ಎಂ.ಎ.ಗೋಪಾಲಸ್ವಾಮಿ ಆಗ್ರಹಿಸಿದರು.

By

Published : Jun 16, 2020, 8:22 PM IST

MLC Gopala swamy
ಮುಖ್ಯಮಂತ್ರಿಗೆ ಮನವಿ ಮಾಡಿದ ಗೋಪಾಲಸ್ವಾಮಿ

ಹಾಸನ: ಗೋವುಗಳ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಇರುವ ಕಾಳಜಿ ತಿಳಿದಿದೆ. ಅಮೃತ್ ಮಹಲ್ ತಳಿ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ವಿಧಾನ ಪರಿಷತ್​ ಸದಸ್ಯ ಎಂ.ಎ.ಗೋಪಾಲಸ್ವಾಮಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 500 ವರ್ಷಕ್ಕೂ ಅಧಿಕ ಇತಿಹಾಸವಿರುವ ಅಮೃತ್ ಮಹಲ್‍ ತಳಿಗಳು ರಾಜ್ಯದ 63 ಸ್ಥಳಗಳಲ್ಲಿವೆ. ಅದರಲ್ಲೂ ಅರಸೀಕೆರೆಯ ಹಬ್ಬನಘಟ್ಟದಲ್ಲಿ ಸುಮಾರು 1500 ಎಕರೆ ಪ್ರದೇಶದಲ್ಲಿ, ಚನ್ನರಾಯಪಟ್ಟಣ ತಾಲೂಕು ಕುರಿಕಾವಲ್​​ನ 500 ಎಕರೆ ಪ್ರದೇಶದಲ್ಲಿವೆ ಎಂದರು.

ಇಡೀ ರಾಜ್ಯದಲ್ಲಿ ವಿಭಿನ್ನ ತಳಿಗಳಿದ್ದು, ಉಳಿಸುವ ಕೆಲಸ ಮಾಡಬೇಕು. ಅಮೃತ್ ಮಹಲ್‌ನಲ್ಲಿರುವ ಗೋವುಗಳನ್ನು ಹಬ್ಬನಘಟ್ಟ, ರಾಯಸಂದ್ರದ ಹಸುಗಳನ್ನು ದಾನದ ಮೂಲಕ ಹಾಗೂ ಎನ್​ಜಿಒ ಮೂಲಕ ಕೊಡಲು ಹೊರಟಿದ್ದಾರೆ. ಕರ್ನಾಟಕ ಸರ್ಕಾರ ಗೋ ಮಾಂಸ ಮಾರಾಟವನ್ನು ನಿಷೇಧ ಮಾಡಬೇಕು. ಗೋವುಗಳನ್ನು ರಕ್ಷಣೆ ಮಾಡಬೇಕು ಎಂದರು. ಹಸುವನ್ನು ಕಾಮಧೇನು ರೀತಿ ಗೃಹ ಪ್ರವೇಶ ಇತರೆ ಶುಭ ಕಾರ್ಯದಲ್ಲಿ ಕಾಣುತ್ತೇವೆ. ಹಾಗೇ ಸಿಎಂ ಮನೆಯಲ್ಲಿ ಹಸು ಇಟ್ಟುಕೊಂಡು ಮುದ್ದಾಡುವುದನ್ನು ಕಂಡಿದ್ದೇವೆ ಎಂದು ಸಿಎಂಗೆ ಹಸುಗಳ ಮೇಲಿರುವ ಪ್ರೀತಿ ಬಗ್ಗೆ ಹೇಳಿದರು.

ಗೋಪಾಲಸ್ವಾಮಿ, ವಿಧಾನ ಪರಿಷತ್​ ಸದಸ್ಯ

ಚನ್ನರಾಯಪಟ್ಟಣದ ನುಗ್ಗೆಹಳ್ಳಿಯಲ್ಲಿ ಹಳ್ಳ ತೋಡಿರುವುದರಿಂದ ಅಲ್ಲಲ್ಲಿ ಹಸುಗಳು ಬಿದ್ದು ಸತ್ತು ಹೋಗುತ್ತಿವೆ. ರಾಜಧಾನಿಯಲ್ಲೇ ಗೋವುಗಳನ್ನು ಸಾಕುವಾಗ 1500 ಎಕರೆ ಪ್ರದೇಶದಲ್ಲಿ 250 ಗೋವುಗಳನ್ನು ಸಾಕಲು ಆಗುವುದಿಲ್ಲವೇ? ಮನೆಯಲ್ಲಿ ತಂದೆ-ತಾಯಿಯರನ್ನು ವಯಸ್ಸಾದವರೆಂದು ಹೊರ ಹಾಕಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

ABOUT THE AUTHOR

...view details