ಕರ್ನಾಟಕ

karnataka

ETV Bharat / state

ಗುಡುಗು-ಸಿಡಿಲಿನ ಅಬ್ಬರಕ್ಕೆ ಬಲಿಯಾದ ಜಾನುವಾರುಗಳು - ಸಿಡಿಲು ಬಡಿದು ಎರಡು ಹಸುಗಳು ಸಾವು

ಹಾಸನ ಜಿಲ್ಲೆಯ ಅರಕಲಗೋಡಿನಲ್ಲಿ ಮಳೆ ಹಿನ್ನಲೆ ಬಡಿದ ಸಿಡಿಲು ಗುಡುಗಿಗೆ 1.5ಲಕ್ಷ ಮೌಲ್ಯದ ಜಾನುವಾರುಗಳು ಮೃತಪಟ್ಟಿವೆ.

ಸಿಡಿಲಿನ ಅಬ್ಬರಕ್ಕೆ ಬಲಿಯಾದ ಜಾನುವಾರುಗಳು

By

Published : May 25, 2019, 3:07 AM IST

ಹಾಸನ:ಕೃತಿಕ ಮಳೆ ಹಿನ್ನೆಲೆ ಬಡಿದಿರುವ ಸಿಡಿಲಿಗೆ ಎರಡು ಜಾನುವಾರುಗಳು ಮೃತಪಟ್ಟಿರುವ ಘಟನೆ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.

ಅರಕಲಗೂಡು ತಾಲೂಕು ಕಸಬಾ ಹೋಬಳಿ ಪಿ.ಚಾಕನಹಳ್ಳಿಯಲ್ಲಿ ಘಟನೆ ನಡೆದಿದ್ದು, ಗ್ರಾಮದ ಗುಂಡೇಗೌಡ ಎಂಬುವವರಿಗೆ ಸೇರಿದ ಎರಡು ಹಸುಗಳು ಮೃತ ಪಟ್ಟಿವೆ. ಇವು ಸುಮಾರು 1.5ಲಕ್ಷ ಬೆಲೆ ಬಾಳುವ ಹಸುಗಳಾಗಿದ್ದವು ಎಂದು ಹೇಳಲಾಗಿದೆ.

ಸ್ಥಳಕ್ಕೆ ಗ್ರಾಮ ಲೆಕ್ಕಿಗರಾದ ಬಸವರಾಜ್, ರಾಜ್ಯ ನೀರೀಕ್ಷಕರಾದ ಶಿವಕುಮಾರ್ ಮತ್ತು ಸ್ಥಳೀಯ ಪಶು ಅಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ದರ್ಶನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details