ಹಾಸನ: ಭಾರತೀಯ ಜನತಾ ಪಾರ್ಟಿಯಿಂದ ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಸವಿತಾ ಸಮಾಜದ ಅಭ್ಯರ್ಥಿಗೆ ರಾಜ್ಯಸಭೆಗೆ ಅವಕಾಶ ನೀಡಿರುವ ನಾಯಕರಿಗೆ ಧನ್ಯವಾದ ತಿಳಿಸುವುದಾಗಿ ಸಮಾಜದ ಜಿಲ್ಲಾಧ್ಯಕ್ಷ ರವಿಕುಮಾರ್ ಹೇಳಿದರು.
ಸವಿತಾ ಸಮಾಜದ ವ್ಯಕ್ತಿಗೆ ರಾಜ್ಯಸಭೆ ಟಿಕೆಟ್ : ಧನ್ಯವಾದ ಹೇಳಿದ ಜಿಲ್ಲಾಧ್ಯಕ್ಷ ರವಿಕುಮಾರ್ - ಸವಿತಾ ಸಮಾಜದ ಅಭ್ಯರ್ಥಿಗೆ ರಾಜ್ಯಸಭೆಗೆ ಅವಕಾಶ
ಸವಿತಾ ಸಮಾಜದ ಅಭ್ಯರ್ಥಿಗೆ ರಾಜ್ಯಸಭೆಗೆ ಅವಕಾಶ ನೀಡಿರುವ ನಾಯಕರಿಗೆ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ರವಿಕುಮಾರ್ ಧನ್ಯವಾದ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ರಾಜಕೀಯ ಧುರೀಣರು, ಆರ್ಥಿಕವಾಗಿ ಸಬಲವಾಗಿರುವ ರಾಜಕೀಯ ಹಿನ್ನಲೆಯುಳ್ಳವರು ಹಾಗೂ ಅನೇಕ ಜನರು ರಾಜ್ಯಸಭೆಗೆ ಅಭ್ಯರ್ಥಿಗಳ ಆಕಾಂಕ್ಷಿಗಳ ಲಾಬಿಗೆ ಮುಂದಾಗಿದ್ದರೂ ಯಾರಿಗೂ ಮನ್ನಣೆ ನೀಡಿಲ್ಲ. ಬದಲಾಗಿ ಪಕ್ಷದ ಸಾಮಾನ್ಯ ಕಾರ್ಯಕರ್ತರಾದ ಹಿಂದುಳಿದ ವರ್ಗದ ಮತ್ತು ಸವಿತಾ ಸಮುದಾಯಕ್ಕೆ ಸೇರಿರುವ ರಾಯಚೂರು ಜಿಲ್ಲೆಯ ಅಶೋಕ್ ಗಸ್ತಿ ಅವರನ್ನು ಆಯ್ಕೆ ಮಾಡಿರುವುದು ನಮ್ಮ ಸಮಾಜಕ್ಕೆ ಸಂತಸ ತಂದಿದೆ ಎಂದರು.
ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.