ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದ ಕಾಫಿ ತೋಟದಲ್ಲಿ ಐದು ದಿನಗಳ ಹಿಂದೆ ಆನೆಯೊಂದು ಹೆಣ್ಣುಮರಿಗೆ ಜನ್ಮ ನೀಡಿತ್ತು. ಆದರೆ, ಆನೆ ಮರಿ ಹುಟ್ಟಿದಾಗಿನಿಂದ ನಡೆಯಲು ಸಾಧ್ಯವಾಗದೆ ಮಲಗಿದ್ದಲ್ಲಿಯೇ ಮಲಗಿತ್ತು. ತಾಯಿ ಆನೆ ತನ್ನ ಮರಿಯನ್ನ ಕರೆದೊಯ್ಯಲು ಹರಸಾಹಸ ಪಟ್ಟಿತ್ತು.
ಐದು ದಿನಗಳಿಂದ ಮೇಲೇಳದ ಮರಿಯಾನೆ.. ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಜನ..! - ಹಾಸನದಲ್ಲಿ ಮರಿಯಾನೆ ರಕ್ಷಣೆ
ಐದು ದಿನಗಳಿಂದ ಮಲಗಿದ್ದಲ್ಲಿಯೇ ಮಲಗಿ ನರಕಯಾತನೆ ಅನುಭವಿಸುತ್ತಿದ್ದ ಮರಿಯಾನೆಗೆ ಸ್ಥಳೀಯರು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮರಿಯಾನೆ ರಕ್ಷಣೆ
ಇದನ್ನು ಮನಗಂಡ ಸ್ಥಳೀಯರು, ಪಶು ವೈದ್ಯರಿಗೆ ತಿಳಿಸಿ ಆನೆ ಮರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕಾಗಮಿಸಿ ಮರಿಯಾನೆಗೆ ಕೃತಕ ಆಹಾರ ನೀಡಿದರು. ಆದರೂ ಮರಿಯಾನೆ ಚೇತರಿಸಿಕೊಳ್ಳದೆ ಇದ್ದುದರಿಂದ ಪಶು ವೈದ್ಯಕೀಯ ಕಾಲೇಜಿಗೆ ಕರೆ ತಂದು ಚಿಕಿತ್ಸೆ ನೀಡಲಾಗ್ತಿದೆ.
ಎಕ್ಸ್ರೇ, ಸ್ಕ್ಯಾನಿಂಗ್ ಮಾಡಿ ಚಿಕಿತ್ಸೆ ನೀಡಲಾಗ್ತಿದೆ, ಮೇಲಧಿಕಾರಿಗಳ ಒಪ್ಪಿಗೆ ಸಿಕ್ಕ ತಕ್ಷಣ ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರಕ್ಕೆ ಸ್ಥಳಾಂತರಿಸುವುದಾಗಿ ಪಶುವೈದ್ಯರು ತಿಳಿಸಿದ್ದಾರೆ.