ಹಾಸನ: ದೇಶ ಕಟ್ಟುವ ಕಾರ್ಯವನ್ನು ಭಾರತದ ಉದ್ದಕ್ಕೂ ಮಾಡ್ತಿರೋದು, ಮುಂದೆಯೂ ಭಾರತ ಭಾರತವಾಗಿ ಉಳಿಯಬೇಕೆಂದು ಬಯಸೋದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಅಂತ ಸಂಘದ ವಿರುದ್ಧ ಮಾತನಾಡಿದರೆ ಮುಂದೆ ತಲೆನೇ ಕಟ್ಟಾಗುತ್ತೆ ಎಂದು ಪಿಎಫ್‍ಐ ಸಂಘಟನೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬೇಲೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಭಕ್ತ ಮತ್ತು ದೇಶ ದ್ರೋಹಿ, ದೇಶ ಭಕ್ತನ ಜೊತೆ ದೇಶ ದ್ರೋಹಿ ಕೆಲಸ ಮಾಡೋದು ಅಕ್ಷ್ಯಮ್ಯ ಅಪರಾಧ. ಆರ್ಎಸ್ಎಸ್ ಒಂದು ದೇಶ ಭಕ್ತ ಸಂಘಟನೆ. ಭಾರತವನ್ನ ಮೊಘಲರ ಸ್ಥಾನ ಮಾಡಿ ಹಿಂದೂಗಳಲ್ಲ ಸರ್ವನಾಶ ಮಾಡಬೇಕು ಎಂದು ಬಯಸೋದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ. ಇಂತಹ ಹೋಲಿಕೆ ಮಾಡುವವರಿಗೆ ಏನು ಹೇಳಬೇಕು. ಯಾರಾದರೂ ತಲೆ ಸರಿ ಇದ್ದರೆ ಹೋಲಿಕೆ ಮಾಡ್ತಾರಾ? ಎಂದು ಪ್ರಶ್ನಿಸಿದರು.
ಆರ್ಎಸ್ಎಸ್ ಬೈದರೆ ಓಟು ಸಿಗುತ್ತೆ ಅನ್ನುವ ದುರಾಸೆ. ಇವರಿಗೂ ಪಿಎಫ್‍ಐಗೂ ವ್ಯತ್ಯಾಸ ಏನು..? ಪಿಎಫ್‍ಐ, ಕಾಂಗ್ರೆಸ್‍ನವರು ಆರ್ಎಸ್ಎಸ್ನೇ ಟಾರ್ಗೆಟ್ ಮಾಡ್ತಾರೆ. ಹಾಗಾದ್ರೆ ಇವರಿಬ್ಬರಿಗೂ ಒಳ ಹೊಂದಾಣಿಕೆ ಇರುವ ಸಾಧ್ಯತೆ ಇದೆ. ಮೊಘಲ್ ಸ್ತಾನ್ ಮಾಡಲು ನೀವು ನಮಗೆ ಸಹಾಯ ಮಾಡಿ ನಿಮಗೆ ನಾವು ಓಟು ಹಾಕ್ತೀವಿ ಅಂತ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದರು.