ಕರ್ನಾಟಕ

karnataka

ETV Bharat / state

ಸಕಲೇಶಪುರ: ಲಾಕ್‌ಡೌನ್ ತೆರವಾದರು ಸಹ ವ್ಯಾಪಾರ ಮಾತ್ರ ನೀರಸ - Sakaleshpura

ಭಾನುವಾರದ ಕರ್ಫ್ಯೂವನ್ನು ರಾಜ್ಯ ಸರ್ಕಾರ ತೆರವು ಮಾಡಿದರು ಗ್ರಾಮಾಂತರ ಪ್ರದೇಶಗಳಿಂದ ಜನ ಅಷ್ಟಾಗಿ ಹೊರಗೆ ಬರದ ಕಾರಣ ಸಕಲೇಶಪುರ ಪಟ್ಟಣದ ಮಾರುಕಟ್ಟೆ ಬಿಕೋ ಎನ್ನುತ್ತಿತ್ತು.

No lockdown sakaleshpura
Sakaleshpura low business

By

Published : May 31, 2020, 8:27 PM IST

ಸಕಲೇಶಪುರ:ಭಾನುವಾರದ ಕರ್ಫ್ಯೂವನ್ನು ರಾಜ್ಯ ಸರ್ಕಾರ ತೆರವುಗೊಳಿಸಿ ಆದೇಶ ಹೊರಡಿಸಿದರು ಸಹ ಜನ ಅಷ್ಟಾಗಿ ಖರೀದಿ ಮಾಡಲು ಆಸಕ್ತಿ ತೋರದ ಕಾರಣ ಪಟ್ಟಣದ ವರ್ತಕರು ಹೆಚ್ಚಿನ ವ್ಯಾಪಾರ ಮಾಡಲಾಗದೇ ನಿರಾಶೆ ಅನುಭವಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಲಾಕ್​ಡೌನ್ ಹೇರಲಾಗಿತ್ತು. ಆದರೆ, ಸರ್ಕಾರ ಅಂತಿಮ ಕ್ಷಣದಲ್ಲಿ ಭಾನುವಾರ ಆಗಬೇಕಾಗಿದ್ದ ಲಾಕ್​ಡೌನ್​ಅನ್ನು ರದ್ದುಪಡಿಸಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದು ವರ್ತಕರಲ್ಲಿ ಸಂತೋಷ ಹುಟ್ಟಿಸಿತ್ತು. ಆದರೆ, ಭಾನುವಾರ ಗ್ರಾಮಾಂತರ ಪ್ರದೇಶಗಳಿಂದ ಜನ ಅಷ್ಟಾಗಿ ಪಟ್ಟಣದತ್ತ ಸುಳಿಯದ ಕಾರಣ ಪಟ್ಟಣದ ಮಾರುಕಟ್ಟೆ ಬಿಕೋ ಎನ್ನುತ್ತಿತ್ತು.

ಇನ್ನು ಜನನಿಬಿಡ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಹ ವಾಹನಗಳ ತಿರುಗಾಟ ಅಷ್ಟಾಗಿ ಕಾಣಲಿಲ್ಲ. ಇದರಿಂದಾಗಿ ಹಲವು ವರ್ತಕರುಗಳು ಮಧ್ಯಾಹ್ನದ ನಂತರ ತಮ್ಮ ಅಂಗಡಿ ಮುಂಗಟ್ಟುಗಳಿಗೆ ಬಾಗಿಲು ಹಾಕಿ ಕುಟುಂಬದೊಡನೆ ಕಾಲ ಕಳೆಯಲು ತೆರಳಿದರು.

ದಿನಸಿ, ಬಟ್ಟೆ, ಚಪ್ಪಲಿ, ಹಾರ್ಡ್​ವೇರ್, ಕೃಷಿ ಪರಿಕರ, ಮೊಬೈಲ್, ಪಾತ್ರೆ, ಚಿನ್ನ ಬೆಳ್ಳಿ, ಹಣ್ಣು ತರಕಾರಿ, ಬೇಕರಿ ಸೇರಿದಂತೆ ಎಲ್ಲಾ ರೀತಿಯ ಅಂಗಡಿಗಳು ತೆರೆದಿದ್ದರು ಸಹ ವ್ಯಾಪಾರ ಅಷ್ಟಾಗಿ ನಡೆಯಲಿಲ್ಲ. ಮಾಂಸದ ಅಂಗಡಿಗಳಿಗೂ ಸಹ ಜನ ಅಷ್ಟಾಗಿ ಮುಗಿ ಬೀಳಲಿಲ್ಲ.

ಒಟ್ಟಾರೆಯಾಗಿ ಲಾಕ್​​ಡೌನ್ ತೆರವುಗೊಂಡಿದ್ದರು ಸಹ ಪಟ್ಟಣದಲ್ಲಿ ವ್ಯಾಪಾರ ವ್ಯವಹಾರ ನೀರಸವಾಗಿತ್ತು.

ABOUT THE AUTHOR

...view details