ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಬಸ್ ಸಂಚಾರ ಪ್ರಾರಂಭ - KSRTC Divisional Controller Rajesh Shetty

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಕಳೆದ ಮೂರು ದಿನಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಪರಿಣಾಮ ಮಧ್ಯಮ ವರ್ಗದ ಜನ ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಈಗ ಬಸ್ ಆರಂಭವಾಗಿರುವುದು ಖುಷಿ ತಂದಿದೆ ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು..

ಬಸ್ ಸಂಚಾರ ಪ್ರಾರಂಭ
ಬಸ್ ಸಂಚಾರ ಪ್ರಾರಂಭ

By

Published : Dec 14, 2020, 8:46 AM IST

ಹಾಸನ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಹಾಸನದಲ್ಲಿ ಬಸ್ ಸಂಚಾರ ಪ್ರಾರಂಭವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಿನ್ನೆ ಕೆಎಸ್ಆರ್​ಟಿಸಿ ಸಿಬ್ಬಂದಿ ಜೊತೆ ಸರ್ಕಾರದ ಸಂಧಾನ ಯಶಸ್ವಿಯಾಗಿದೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆ ಹಾಸನದ ಡಿಪೋಗಳಲ್ಲಿ ನಿಂತಿದ್ದ ಬಸ್‌ಗಳು ಹೊರಡಲು ಆರಂಭಿಸಿದವು.

ಕೆಎಸ್ಆರ್​ಟಿಸಿ ನಿಗಮದ ಉಪಾಧ್ಯಕ್ಷ ಈಶ್ವರ್ ನೇತೃತ್ವದಲ್ಲಿ ಸಿಬ್ಬಂದಿಯ ಮನವೊಲಿಸುವ ಕಾರ್ಯ ನಡೆದಿದ್ದು, ಹಾಸನದ ಕೆಎಸ್ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಬಸ್​ಗಳಿಗೆ ಚಾಲನೆ ನೀಡಿದರು.

ಹಾಸನದಲ್ಲಿ ಬಸ್ ಸಂಚಾರ ಪ್ರಾರಂಭ

ಹಾಸನದ ಮೊದಲ ಡಿಪೋ ಹಾಗೂ ಎರಡನೇ ಡಿಪೋದಿಂದ ತಲಾ 5 ಬಸ್​ಗಳು ಹಾಗೂ ಅರಕಲಗೂಡು, ರಾಮನಾಥಪುರ, ಹೊಳೆನರಸಿಪುರ, ಚನ್ನರಾಯಪಟ್ಟಣದಿಂದ ತಲಾ 2 ಬಸ್​ಗಳಂತೆ ಒಟ್ಟು ಹಾಸನದಿಂದ 22 ಬಸ್​ಗಳನ್ನು ಮತ್ತು ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗಕ್ಕೂ ಕೂಡ 6 ಬಸ್​ಗಳನ್ನು ಪೊಲೀಸ್ ಸೂಕ್ತ ಬಂದೋಬಸ್ತ್ ಮೂಲಕ ಬಿಡಲಾಯಿತು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದರು.

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಕಳೆದ ಮೂರು ದಿನಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಪರಿಣಾಮ ಮಧ್ಯಮ ವರ್ಗದ ಜನ ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಈಗ ಬಸ್ ಆರಂಭವಾಗಿರುವುದು ಖುಷಿ ತಂದಿದೆ ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು.

ABOUT THE AUTHOR

...view details