ಚನ್ನರಾಯಪಟ್ಟಣ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ, ಎಂ.ಹೊನ್ನೇನಹಳ್ಳಿ ಬಳಿ ಸಂಪೂರ್ಣ ಸುಟ್ಟು ಕರಕಲಾಗಿರುವ ಕಾರು ಮತ್ತು ಮೃತದೇಹ ಪತ್ತೆಯಾಗಿದೆ.
ಸುಟ್ಟ ಕಾರು, ಕರಕಲಾದ ಮೃತದೇಹ: ಚನ್ನರಾಯಪಟ್ಟಣದಲ್ಲಿ ನಡೆದಿದ್ದೇನು? - ಚನ್ನರಾಯಪಟ್ಟಣದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿರುವ ಕಾರು
ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ಹೊನ್ನೇನಹಳ್ಳಿ ಬಳಿ ಸಂಪೂರ್ಣ ಸುಟ್ಟು ಕರಕಲಾಗಿರುವ ಮೃತದೇಹ ಪತ್ತೆಯಾಗಿದ್ದು, ಕಾರಿನ ಡಿಕ್ಕಿಯಲ್ಲಿ ಶವವಿಟ್ಟು ಕಾರಿಗೆ ಬೆಂಕಿ ಹಾಕಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
![ಸುಟ್ಟ ಕಾರು, ಕರಕಲಾದ ಮೃತದೇಹ: ಚನ್ನರಾಯಪಟ್ಟಣದಲ್ಲಿ ನಡೆದಿದ್ದೇನು? ಸುಟ್ಟ ಕಾರು.. ಬೆಂದು ಕರಕಲಾದ ಮೃತದೇಹ..](https://etvbharatimages.akamaized.net/etvbharat/prod-images/768-512-9337556-1004-9337556-1603859790205.jpg)
ಸುಟ್ಟ ಕಾರು.. ಬೆಂದು ಕರಕಲಾದ ಮೃತದೇಹ..
ಸುಟ್ಟ ಕಾರು, ಕರಕಲಾದ ಮೃತದೇಹ
ಕಾರಿನ ಡಿಕ್ಕಿಯಲ್ಲಿ ಶವವಿಟ್ಟು ಕಾರಿಗೆ ಬೆಂಕಿ ಹಾಕಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಬೆಳಗಿನ ಜಾವ ಸುಮಾರು 3 ಗಂಟೆ ಹೊತ್ತಿಗೆ ಘಟನೆ ಜರುಗಿರಬಹುದೆಂದು ಹೇಳಲಾಗಿದೆ.
ಹಿರೀಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಶ್ರೀನಿವಾಸ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Last Updated : Oct 28, 2020, 10:28 AM IST