ಶಿವಮೊಗ್ಗ/ಹಾಸನ:ಮದುವೆಯಾದ ಗಂಡನನ್ನೇ ಅಕ್ಕ ಕೊಂದಳೆಂದು, ಅಕ್ಕನನ್ನು ಕೊಂದ ತಮ್ಮನೊಬ್ಬ ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ತುಮಕೂರು ಜಿಲ್ಲೆಯ ಕೆರೆಸೂರಗೊಂಡನಹಳ್ಳಿ ಗ್ರಾಮದ ಮಂಜುನಾಥ್(26) ಎಂದು ಗುರುತಿಸಲಾಗಿದೆ.
ಮೃತ ಮಂಜುನಾಥ್ ಅವರ ದೊಡ್ಡಮ್ಮನ ಮಗಳು ಸುಧಾ, ಹಾಸನ ಜಿಲ್ಲೆ ಹುಳಿಯೂರಿನಲ್ಲಿ ಮಹಿಳಾ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಸುಧಾ ತನ್ನ ಸ್ನೇಹಿತನ ಜೊತೆ ಸೇರಿ ತನ್ನ ಗಂಡನನ್ನು ಕೊಂದಿದ್ದಾರೆ. ಇದರಿಂದ ನನಗೆ ತುಂಬ ಕೋಪ ಬಂದಿದ್ದು, ನಾನು ಆಕೆಯನ್ನು ಬೀದಿ ಹೆಣ ಮಾಡುವುದಾಗಿ ಡೆತ್ ನೋಟು ಬರೆದಿಟ್ಟು ಶಿವಮೊಗ್ಗದ ಲಾಡ್ಜ್ ನಲ್ಲಿ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಜುನಾಥ್ ಸೆಪ್ಟಂಬರ್ 13 ರಂದು ಶಿವಮೊಗ್ಗಕ್ಕೆ ಬಂದು ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ನಿನ್ನೆ ಕೊಠಡಿಯ ಬಾಗಿಲು ತೆಗೆಯದ ಕಾರಣ ಪೊಲೀಸರನ್ನು ಕರೆಯಿಸಿ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆಗೆ ಶರಣಾಗಿದ್ದು ತಿಳಿದು ಬಂದಿದೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.