ಕರ್ನಾಟಕ

karnataka

ETV Bharat / state

ಬ್ರಹ್ಮಶ್ರೀ ನಾರಾಯಣ ಗುರು ಎಲ್ಲಾ ವರ್ಗದವರಿಲ್ಲಿ ಸಮಾನತೆ ಮೂಡಿಸಿದ್ದವರು: ಆರ್.ಗಿರೀಶ್ - Hassan News

ಅಂದಿನ ಸಮಾಜದಲ್ಲಿದ್ದ ಬೇರೂರಿದ್ದ ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಸಿಡಿದೆದ್ದು ಜನಸಾಮಾನ್ಯರಿಗೆ, ದಲಿತರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಸಮಾನತೆ ಬಗ್ಗೆ ಅರಿವು ಮೂಡಿಸಿದವರು ಬ್ರಹ್ಮಶ್ರೀ ನಾರಾಯಣ ಗುರು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರು ಎಲ್ಲಾ ವರ್ಗದವರಿಲ್ಲಿ ಸಮಾನತೆ ಮೂಡಿಸಿದ್ದವರು: ಆರ್.ಗಿರೀಶ್

By

Published : Sep 14, 2019, 1:19 PM IST

ಹಾಸನ:ಅಂದಿನ ಸಮಾಜದಲ್ಲಿದ್ದ ಬೇರೂರಿದ್ದ ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಸಿಡಿದೆದ್ದು ಜನಸಾಮಾನ್ಯರಿಗೆ, ದಲಿತರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಸಮಾನತೆ ಬಗ್ಗೆ ಅರಿವು ಮೂಡಿಸಿದವರು ಬ್ರಹ್ಮಶ್ರೀ ನಾರಾಯಣ ಗುರು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರು ಎಲ್ಲಾ ವರ್ಗದವರಿಲ್ಲಿ ಸಮಾನತೆ ಮೂಡಿಸಿದ್ದವರು: ಆರ್.ಗಿರೀಶ್

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರೂಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, 19ನೇ ಶತಮಾನದ ಕೊನೆಯಲ್ಲಿ ಕೇರಳದಲ್ಲಿ ಜನಿಸಿದ ನಾರಾಯಣ ಗುರು ಅವರು, ಅಂದಿನ ಸಮಾಜದಲ್ಲಿದ್ದ ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಸಿಡಿದೆದ್ದು ಜನರಿಗೆ, ದಲಿತರಿಗೆ, ಹಿಂದುಳಿದ ವರ್ಗದವರಿಗೆ ಸಮಾನತೆ ಬಗ್ಗೆ ಅರಿವು ಮೂಡಿಸಿದ್ರು.

ಅಲ್ಲದೇ, ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ, ಸಮಾಜದಲ್ಲಿ ಅವರೇ ಸ್ವತಃ ವಿದ್ವಾಂಸರಾಗಿದ್ದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವುಗಳು ನಡೆಯಬೇಕಾಗಿದೆ. ಯಾವುದೇ ಜಯಂತಿ ಆಚರಿಸುವಾಗ ಅವರ ಸಂದೇಶವೇನು? ಅವರು ಜೀವನದಲ್ಲಿ ಏನನ್ನು ಅಳವಡಿಸಿಕೊಂಡಿದ್ದರು ಎಂಬುದರ ಬಗ್ಗೆ ನಾವುಗಳೆಲ್ಲಾ ಯೋಚನೆ ಮಾಡಬೇಕಾಗಿದೆ ಎಂದರು.

ABOUT THE AUTHOR

...view details