ಹಾಸನ:ಕಬ್ಬು ಅರೆಯುವ ಯಂತ್ರಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಿದ ಬೆನ್ನಲ್ಲಿಯೇ ಬೆಂಕಿ ಹೊತ್ತಿಸುವ ಬಾಕ್ಸ್ ಸ್ಫೋಟಗೊಂಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಚನ್ನರಾಯಪಟ್ಟಣದ ಸಕ್ಕರೆ ಕಾರ್ಖನೆಯಲ್ಲಿ ಬಾಯ್ಲರ್ ಸ್ಫೋಟ - ಹಾಸನ ಲೆಟೆಸ್ಟ್ ನ್ಯೂಸ್
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿದ್ದ ಚಾಮುಂಡೇಶ್ವರಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿದ್ದ ಬಾಯ್ಲರ್ ಸ್ಫೋಟಗೊಂಡು ಕೋಟ್ಯಾಂತರ ರೂ ನಷ್ಟ ಸಂಭವಿಸಿದೆ.

ಚನ್ನರಾಯಪಟ್ಟಣದ ಚಾಮುಂಡೇಶ್ವರಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿದ್ದ ಬಾಯ್ಲರ್ ಸ್ಫೋಟಗೊಂಡು ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಹಳೆ ಯಂತ್ರೋಪಕರಣಗಳು ಹಾಳಾಗಿದ್ದು, 150ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಯಂತ್ರದ ಮೂಲಕ ಮುಂದಿನ ತಿಂಗಳಿಂದ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಬೇಕಿತ್ತು. ಅದರ ಅಂಗವಾಗಿ ನಿನ್ನೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಕೇವಲ 24 ಗಂಟೆಯೊಳಗೆ ಬಾಯ್ಲರ್ ಸ್ಟೋಟಗೊಂಡಿದೆ.
ಭಾನುವಾರ ಕಾರ್ಮಿಕರಿಗೆ ರಜೆಯಿದ್ದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಈ ಯಂತ್ರೋಪಕರಣವನ್ನು ಅಳವಡಿಸುವ ಕಾರ್ಯವನ್ನು ದೆಹಲಿ ಮೂಲದ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ನಾಳೆ ಮಧ್ಯಾಹ್ನ ಗುತ್ತಿಗೆದಾರರು ಬರುವ ಸಾಧ್ಯತೆಯಿದೆ.