ಹಾಸನ:ಮುಂದಿನ 2023ರ ಚುನಾವಣೆಯಲ್ಲಿ ನನ್ನ ವಿರುದ್ಧ ಹೆಚ್.ಡಿ. ರೇವಣ್ಣ ಅವರು ಬಂದು ನಿಲ್ಲಲಿ. 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಅಥವಾ 50 ಸಾವಿರಕ್ಕಿಂತ 1 ಮತ ಕಡಿಮೆ ಬಂದರೂ ಮತ್ತೊಮ್ಮೆ ಚುನಾವಣೆ ಎದುರಿಸುತ್ತೇನೆ. ತಾಕತ್ತಿದ್ದರೆ ರೇವಣ್ಣ ನನ್ನ ವಿರುದ್ಧ ಸ್ಪರ್ಧೆ ಮಾಡಲಿ ಅಂತ ಪ್ರೀತಂ ಗೌಡ ಬಹಿರಂಗ ಸವಾಲು ಹಾಕಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರಿಂದ ನಾನು ಏನನ್ನೂ ಕಲಿಯಬೇಕಾಗಿಲ್ಲ. ಚುನಾವಣೆಯಲ್ಲಿ ನನ್ನ ವಿರುದ್ಧ ಅವರೇ ಬಂದು ಸ್ಪರ್ಧೆ ಮಾಡಬೇಕು. ಈಗಾಗಲೇ ನಾನು ಹತ್ತಾರು ಬಾರಿ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ತಾಕತ್ತಿದ್ದರೆ ನನ್ನ ವಿರುದ್ಧ ಬಂದು ಸ್ಪರ್ಧೆ ಮಾಡಲಿ. ಸುಖಾಸುಮ್ಮನೆ ಅವರ ಕ್ಷೇತ್ರವನ್ನು ಬಿಟ್ಟು ನನ್ನ ಕ್ಷೇತ್ರಕ್ಕೆ ಬಂದು ಮಾತನಾಡುವುದಲ್ಲ ಎಂದು ಟೀಕಿಸಿದರು.