ಕರ್ನಾಟಕ

karnataka

ETV Bharat / state

Watch: ಹಾಸನದಲ್ಲಿ ಮಾರಕಾಸ್ತ್ರ ಹಿಡಿದು ಪುಂಡರ ಬೈಕ್ ವೀಲಿಂಗ್

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ ಪಾರ್ಕ್ ಬಳಿ ಐದಾರು ಮಂದಿ ಯುವಕರು ಬೈಕ್ ವೀಲಿಂಗ್ ಮಾಡುವ ಜೊತೆಗೆ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಪುಂಡಾಟಿಕೆ ಮಾಡಿರುವ ಘಟನೆ ನಡೆದಿದೆ.

bike wheeling holding talwar
ಮಾರಕಾಸ್ತ್ರ ಹಿಡಿದು ಪುಂಡರ ಬೈಕ್ ವೀಲಿಂಗ್

By

Published : Nov 26, 2021, 2:02 PM IST

ಹಾಸನ:ಒಂದೆಡೆ ಪೆಟ್ರೋಲ್ ಬೆಲೆ ಗಗನಕ್ಕೇರಿದೆ, ಮತ್ತೊಂದೆಡೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕೆಲ ಪುಂಡ ಹುಡುಗರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನಡುರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್ ವೀಲಿಂಗ್ ಮಾಡುತ್ತಿದ್ದಾರೆ. ಇದನ್ನು ಕಂಡ ಜನರು ಭಯಭೀತರಾಗಿದ್ದಾರೆ.

ಮಾರಕಾಸ್ತ್ರ ಹಿಡಿದು ಪುಂಡರ ಬೈಕ್ ವೀಲಿಂಗ್

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ ಪಾರ್ಕ್ ಬಳಿ ಐದಾರು ಮಂದಿ ಯುವಕರು ಬೈಕ್ ವೀಲಿಂಗ್ ಮಾಡುವ ಜೊತೆಗೆ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಪುಂಡಾಟಿಕೆ ಮಾಡಿರುವ ಘಟನೆ ನಡೆದಿದೆ.

ಗುತ್ತಿಗೆದಾರರ ಸಂಘದ ಕಟ್ಟಡದ ಸಮೀಪದಿಂದ ರಿಲಯನ್ಸ್ ಪೆಟ್ರೋಲ್ ಬಂಕ್ ಮೂಲಕ ಚನ್ನರಾಯಪಟ್ಟಣ ನಗರ ಪ್ರವೇಶಿಸಿರುವ ಪುಂಡರು ಕೈಯಲ್ಲಿ ತಲ್ವಾರ್​​ಗಳನ್ನು ಹಿಡಿದು ಸ್ಥಳೀಯ ಜನರ ನಿದ್ದೆಗೆಡಿಸಿದ್ದಾರೆ. ಮೇಲ್ನೋಟಕ್ಕೆ ಇವರುಗಳು ಚನ್ನರಾಯಪಟ್ಟಣದ ಬಾಗೂರು ರಸ್ತೆಯ ಹುಡುಗರು ಎಂಬ ಮಾಹಿತಿ ದೊರತಿದೆ. ನ.22 ರಂದು ನಡೆದ ಘಟನೆ ಇದಾಗಿದ್ದು, ರೋಡ್ ರಾಬರಿ ಮಾಡುವ ಉದ್ದೇಶದಿಂದ ತಲ್ವಾರ್ ಹಿಡಿದಿರಬಹುದು ಎಂಬ ಅನುಮಾನ ಸ್ಥಳೀಯರದ್ದಾಗಿದೆ.

ಇದನ್ನೂ ಓದಿ: ಸ್ನೇಹಿತನ ಕೊಲೆ ಪ್ರಕರಣ: ಎಂಟು ಅಪ್ರಾಪ್ತರ ಬಂಧಿಸಿದ ಕ್ರೈ ಬ್ರಾಂಚ್​ ಪೊಲೀಸರು!

ಬೈಕ್ ವೀಲಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ಆಧಾರದ ಮೇಲೆ ಚನ್ನರಾಯಪಟ್ಟಣದ ನಗರ ಪೊಲೀಸ್ ಠಾಣೆ ಪೊಲೀಸರು ಹುಡುಗರ ಗುರುತು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಕಾನೂನು ಮತ್ತು ಶಿಸ್ತು ಪಾಲನೆಗಾಗಿ ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಸರ್ಕಾರ ಸಾಕಷ್ಟು ಸೌಕರ್ಯಗಳನ್ನು ಒದಗಿಸಿದೆ. ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸರನ್ನ ನೇಮಕ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂತಹ ಪುಂಡರ ಹೆಡೆಮುರಿಕಟ್ಟಲು ಅವರಿಂದ ಸಾಧ್ಯವಾಗುತ್ತಿಲ್ಲ. ಅದರ ಬದಲು ಕೇವಲ ಟ್ರಾಫಿಕ್ ಸಿಗ್ನಲ್​​ನಲ್ಲಿ ಹೆಲ್ಮೆಟ್ ಧರಿಸಿಲ್ಲ, ನಿಯಮ ಪಾಲಿಸಿಲ್ಲ ಎಂಬುದಕ್ಕೆ ಮಾತ್ರ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಹೆಸರು ಹೇಳಲು ಇಷ್ಟಪಡದ ಹೋಟೆಲ್ ಹಾಗೂ ಪೆಟ್ರೋಲ್ ಬಂಕ್ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details