ಕರ್ನಾಟಕ

karnataka

ETV Bharat / state

ಓವರ್​ ಟೇಕ್​ ಮಾಡಲು ಯತ್ನಿಸಿ ಬೈಕ್​ಗೆ ಲಾರಿ ಡಿಕ್ಕಿ ​​​: ಸವಾರ ಸಾವು - ಹಾಸನ ಬೈಕ್​ ಅಪಘಾತ ಸುದ್ದಿ

ಲಾರಿ ಚಾಲಕ ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡಲು ಯತ್ನಿಸಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಜಾವಗಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bike-rider-died-in-lorry-accident
ಲಾರಿ ಮತ್ತು ಬೈಕ್​ ನಡುವೆ ಅಪಘಾತ

By

Published : Jul 10, 2020, 10:28 PM IST

Updated : Jul 11, 2020, 7:26 AM IST

ಹಾಸನ:ಅರಸೀಕೆರೆ ತಾಲೂಕಿನ ಅರೆಕೆರೆ ಗ್ರಾಮದ ಬಳಿ ಇಂದು ಸಂಜೆ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಬೇಲೂರು ತಾಲೂಕಿನ ಕರಗಟ್ಟ ಗ್ರಾಮದ ಮಂಜು (29) ಮೃತ ದುರ್ದೈವಿ. ಹಿಂಬದಿ ಸವಾರ ಶೆಟ್ಟಿಗೆರೆ ಗ್ರಾಮದ ನಾಗೇಶ್ (40) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿ ಮತ್ತು ಬೈಕ್​ ನಡುವೆ ಅಪಘಾತ

ಗಾರೆ ಕೆಲಸ ಮುಗಿಸಿಕೊಂಡು ಬಾಣಾವರದಿಂದ ಜಾವಗಲ್‌ ಮಾರ್ಗವಾಗಿ ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಲಾರಿ ಚಾಲಕ ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡಲು ಯತ್ನಿಸಿ ಬೈಕ್​ಗೆ ಡಿಕ್ಕಿ ಹೊಡೆಸಿದ್ದಾನೆ. ಲಾರಿ ಚಕ್ರಕ್ಕೆ ಬೈಕ್​​ ಸಿಲುಕಿದ ಪರಿಣಾಮ ಓರ್ವ ಸಾವನ್ನಪ್ಪಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಸ್ಥಳಕ್ಕೆ ಜಾವಗಲ್ ಠಾಣೆ ಎಸ್‌ಐ ಅರುಣ್‌ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Jul 11, 2020, 7:26 AM IST

ABOUT THE AUTHOR

...view details