ಕರ್ನಾಟಕ

karnataka

ETV Bharat / state

ಸಕಲೇಶಪುರ ಕಾಫಿತೋಟದಲ್ಲಿ ನೋಡುಗರ ಎದೇ ಜಲ್ ಎನಿಸುವ​​ ಬೈಕ್ ಮತ್ತು ಕಾರ್ ವಾರ್​ - ಹಾಸನದಲ್ಲಿ ಬೈಕ್ ಮತ್ತು ಕಾರ್ ರೇಸ್

ಹಾಸನ ಜಿಲ್ಲೆಯ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಬೈಕ್ ಮತ್ತು ಕಾರ್ ರೇಸ್ ಆಯೋಜನೆ ಮಾಡಲಾಗಿತ್ತು. ಈ ಸರ್ಧೆಗಳಲ್ಲಿ 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು.

bike and car races in Hassan
ಬೈಕ್ ಮತ್ತು ಕಾರ್ ರೇಸ್

By

Published : Mar 9, 2021, 6:51 AM IST

Updated : Mar 9, 2021, 12:21 PM IST

ಹಾಸನ: ಜಿಲ್ಲೆಯ ಸಕಲೇಶಪುರ ಕಾಫಿತೋಟವೊಂದರಲ್ಲಿ ಮತ್ತು ಬೇಲೂರು ತಾಲೂಕಿನ ಸಂಕೇನಹಳ್ಳಿಯ ರಸ್ತೆ ಪಕ್ಕದ ಮೈದಾನದಲ್ಲಿ ಬೈಕ್ ಮತ್ತು ಕಾರ್ ರೇಸ್ ಆಯೋಜಿಸಲಾಗಿತ್ತು.

ಬೈಕ್ ಮತ್ತು ಕಾರ್ ರೇಸ್

ಈ ಸರ್ಧೆಗಳಲ್ಲಿ150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು. ಸುಮಾರು 800 ಮೀಟರ್ ಟ್ರ್ಯಾಕ್​​ನಲ್ಲಿ ಒಂದೊಂದು ವಿಭಾಗದಲ್ಲಿ 20ಕ್ಕೂ ಹೆಚ್ಚು ಸವಾರರು ಒಂದೇ ಬಾರಿಗೆ ಮೈದಾನದಲ್ಲಿ ಪೈಪೋಟಿ ನಡೆಸಿದರು. ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಬಂದಿದ್ದರು. ಹಾಸನದಲ್ಲಿ ಕಳೆದ 7-8 ವರ್ಷಗಳಿಂದ ಬೈಕ್ ರೇಸ್ ಆಯೋಜನೆ ಮಾಡಲಾಗುತ್ತಿದ್ದು, ಹಾಸನ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಕೊಡಗು, ಮಂಡ್ಯ ಸೇರಿದಂತೆ ಬೇರೆ ರಾಜ್ಯಗಳಿಂದ್ಲೂ ಹಲವು ಸ್ಪರ್ಧಿಗಳು ಭಾಗಿಯಾಗುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಟ್ಯಾಲೆಂಟ್ ತೋರಿದ್ದ ರೇಸರ್ಗಳು ತಮ್ಮ ಸಾಮರ್ಥ್ಯದ ಮೂಲಕ ಎಲ್ಲರ ಹುಬ್ಬೇರಿಸಿದರು. ಹಲವು ವಿಭಾಗಗಳಲ್ಲಿ ನಡೆದ ರೇಸ್​, ನೋಡೋ ಜನರಿಗೆ ಮಸ್ತ್ ಕಿಕ್ ಕೊಟ್ಟಿತ್ತು. ಬೈಕ್ ಸವಾರರು ಧೂಳು ಸೀಳಿಕೊಂಡು ರಾಕೆಟ್​​ಗಳಂತೆ ಮುನ್ನುಗ್ಗುತ್ತಿದ್ದರೆ ಆಯೋಜಕರು ಕೂಡ ಖುಷಿಯಾಗಿದ್ದರು.

ಓದಿ : ಶರ್ಟ್ ನಿಕಾಲೋ ಸಂಗಣ್ಣ... ಸದನದಲ್ಲಿ ಸಂಗಮೇಶ್ ಶರ್ಟ್ ಬಿಚ್ಚಿಸಿದ್ದು ಯಾರು ಗೊತ್ತಾ!?

ಟ್ರೈನಿಂಗ್ ಟ್ರ್ಯಾಕ್ ಕೊರತೆ:ಬೈಕ್ ರೇಸ್ ಎನ್ನುವುದು ಒಂದು ಯುವಕರಿಗೆ ಕಿಕ್ ನೀಡುತ್ತೆ. ಬೈಕ್ ಓಡಿಸೋದು ಒಂದು ಕಲೆ ಎಂಬುದನ್ನು ತೋರಿಸೋಕೆ ಇವರು ಮಾಡೋ ಸ್ಟಂಟ್, ಒಂದು ರೋಮಾಂಚನ. ಇಂತಹ ರೇಸ್ ನಲ್ಲಿಯೇ ಏನಾದ್ರೂ ಸಾಧಿಸಬೇಕು ಎಂದು ಕೊಂಡು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸ್ಪರ್ಧೆ ಮಾಡುತ್ತಾರೆ. ಸ್ಪರ್ಧಾಳುಗಳು ತರಬೇತಿ ಪಡೆಯಲು ಹಾಸನದಲ್ಲಿ ಸುಸಜ್ಜಿತವಾದ ಟ್ರ್ಯಾಕ್ ಕೊರತೆಯಿದೆ. ಹೀಗಾಗಿ ಸ್ಪರ್ಧಿಗಳಿಗೆ ತರಬೇತಿ ಪಡೆಯಲು ಸ್ಥಳವನ್ನು ಜಿಲ್ಲಾಡಳಿತ ಅಥವಾ ಸರ್ಕಾರ ಒದಗಿಸಬೇಕು ಎಂದು ಆಯೋಜಕರು ಆಗ್ರಹ ಮಾಡಿದ್ದಾರೆ .

Last Updated : Mar 9, 2021, 12:21 PM IST

ABOUT THE AUTHOR

...view details