ಕರ್ನಾಟಕ

karnataka

ETV Bharat / state

ನಂಬಿದವರ ಕಷ್ಟಕ್ಕಾದ್ರೆ 10 ಸಾವಿರ ಶತ್ರುಗಳನ್ನು ಸದೆಬಡಿದಂತೆ.. ಭವಾನಿ ರೇವಣ್ಣ - ಭವಾನಿ ರೆವಣ್ಣ ಹುಟ್ಟುಹಬ್ಬ

ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಹಾಗೂ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.

ಹುಟ್ಟು ಹಬ್ಬ ಆಚರಿಸಿಕೊಂಡ ಭವಾನಿ ರೆವಣ್ಣ

By

Published : Nov 19, 2019, 10:03 PM IST

ಹಾಸನ : ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಹಾಗೂ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.

ಹುಟ್ಟುಹಬ್ಬ ಆಚರಿಸಿಕೊಂಡ ಭವಾನಿ ರೇವಣ್ಣ..
ಪಟ್ಟಣದ ತಾಲೂಕು ಕಚೇರಿಯಲ್ಲಿ ಬೆಂಬಲಿಗರು ಆಯೋಜನೆ ಮಾಡಿದ್ದ ತಮ್ಮ ಹುಟ್ಟು ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು, ನಾನು ದೇವರಿಗೆ ಒಂದು ಹೂವು ಹೆಚ್ಚಾಗಿ ಹಾಕಿದ್ದೇನೆ. ಆದ್ದರಿಂದ ನನಗೆ ರಾಜಕೀಯವಾಗಿ ಪ್ರಬುದ್ಧವಾಗಿರುವ ಮನೆತನ ಸಿಕ್ಕಿದೆ. ಆತ್ಮೀಯರು ಎಷ್ಟು ಇರುತ್ತಾರೋ ಶತ್ರುಗಳು ಅಷ್ಟೇ ಇರುತ್ತಾರೆ. ಅಭಿಮಾನಿಗಳ ಕಷ್ಟಕ್ಕೆ ಕರಗಿದರೆ 10 ಸಾವಿರ ಶತ್ರುಗಳನ್ನು ಸೆದೆಬಡಿಯಬಹುದೆಂದು ಭವಾನಿ ರೇವಣ್ಣ ಹೇಳಿದ್ರು. ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಏರ್ಪಡಿಸಲಾಯಿತು. ಇದೇ ವೇಳೆ ವಿವಿಧ ಮಹಿಳಾ ಸಂಘದವರು ಮತ್ತು ಜೆಡಿಎಸ್ ಕಾರ್ಯಕರ್ತರು ಹಾಜರಿದ್ರು.

ABOUT THE AUTHOR

...view details