ಕರ್ನಾಟಕ

karnataka

ETV Bharat / state

ರಕ್ಷಿಸಬೇಕಾದ ಪೊಲೀಸ್ ಠಾಣೆಯಲ್ಲೇ ನಡೆಯಿತಾ ಕೋಳಿ ಬಲಿ?

ಅರಸೀಕೆರೆ ಪಟ್ಟಣದ ಡಿವೈಎಸ್ಪಿ ಕಚೇರಿಯ ಕಟ್ಟಡದಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಭಾನಾಮತಿ ಮಾಡಿಸೋ ವ್ಯಕ್ತಿಯನ್ನು ಕರೆಸಿ ಕರಿ ಕೋಳಿಯನ್ನು ಬಾಗಿಲಿಗೆ ಮೂರು ಬಾರಿ ನೀವಳಿಸಿ, ನಿಂಬೆಹಣ್ಣು, ಒಣ ಮೆಣಸಿನಕಾಯಿ, ಇದ್ದಿಲುಗಳ ಮೂಲಕ ದೃಷ್ಟಿ ತೆಗೆದು ಬಾಗಿಲಿನಲ್ಲಿಯೇ ಕಪ್ಪುಕೋಳಿಯನ್ನು ಬಲಿಕೊಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜವೋ ಇಲ್ಲವೋ ಎಂಬುದನ್ನು ಪೊಲೀಸರೇ ಸ್ಪಷ್ಟಪಡಿಸಬೇಕಿದೆ.

Bhanamathi in Arasikere police station
ಕೋಳಿ ಬಲಿ ಕೊಟ್ಟು ಮೌಢ್ಯತೆ ಮೆರೆದ ಪೊಲೀಸರು

By

Published : Jun 30, 2022, 7:18 AM IST

Updated : Jun 30, 2022, 12:43 PM IST

ಹಾಸನ/ಅರಸೀಕೆರೆ :ಕಪ್ಪು ಕೋಳಿಯನ್ನು ಬಲಿಕೊಟ್ಟು ಪೊಲೀಸ್ ಠಾಣೆಯಲ್ಲಿ ಭಾನಾಮತಿ (ಮಾಟ-ಮಂತ್ರ) ಮಾಡಿಸೋ ಮೂಲಕ ಸರ್ಕಾರಿ ಅಧಿಕಾರಿಗಳು ಮೌಢ್ಯತೆ ಮೆರೆದಿರೋ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ ಎಂಬ ವಿಷಯ ಹೊರಬಿದ್ದಿದೆ. ಹಾಸನ ಜಿಲ್ಲೆಯ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಂತಹುದೊಂದು ಘಟನೆ ನಡೆದಿದ್ದು, ಮಣ್ಣೆತ್ತಿನ ಅಮಾವಾಸ್ಯೆಯ ಹಿನ್ನಲೆಯಲ್ಲಿ ಪೊಲೀಸ್ ಠಾಣೆಗೆ ಈ ರೀತಿಯ ಭಾನಾಮತಿ ಮಾಡಿಸಲಾಗಿದೆ ಎನ್ನಲಾಗಿದೆ.

ಗ್ರಾಮೀಣ ಭಾಗದಲ್ಲಿ ಇಂದಿಗೂ ಮೂಢನಂಬಿಕೆ ಜೀವಂತವಾಗಿದೆ. ಇದನ್ನು ಕೆಲವರು ಸಂಪ್ರದಾಯ ಎಂದು ನಡೆಸಿಕೊಂಡು ಬರುತ್ತಿದ್ದರೆ, ಕೆಲವರು ಮಾತ್ರ ಇಂತಹ ಪದ್ಧತಿ ಆಚರಿಸದಿದ್ದರೆ ಗ್ರಾಮಕ್ಕೆ ಕೆಡುಕಾಗುತ್ತದೆ. ಊರಿಗೆ ಮಾರಿ ಬರುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೆ ಪೊಲೀಸ್ ಠಾಣೆಗೆ ಅದೆಂಥ ರೋಗ ಬರುತ್ತೋ ಗೊತ್ತಿಲ್ಲ. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೌಢ್ಯತೆಗೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎನ್ನಲಾಗಿದೆ. ಕಪ್ಪು ಕೋಳಿಯನ್ನು ಬಲಿಕೊಡುವ ದೃಶ್ಯದ ತುಣುಕೊಂದು ವೈರಲ್​ ಆಗಿದೆ. ಆದರೆ ಇದರ ಸತ್ಯಾಸತ್ಯತೆಯ ಬಗ್ಗೆ ಖಚಿತತೆ ಇಲ್ಲ.

ಕೋಳಿ ಬಲಿ ಕೊಟ್ಟು ಮೌಢ್ಯತೆ ಮೆರೆದ ಪೊಲೀಸರು

ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಮಕ್ಕಳು, ಯುವಕರು, ಅಥವಾ ದೊಡ್ಡವರು ನಡೆಯುವಾಗ ಅಥವಾ ಒಂದೇ ಸ್ಥಳದಲ್ಲಿ 2-3 ಬಾರಿ ಎಡವಿ ಬಿದ್ದಾಗ, ಅಥವಾ ಗ್ರಾಮಕ್ಕೆ ಹೊಸಬರು ಯಾರಾದರೂ ಬಂದರೇ ಕೋಳಿ ಅಥವಾ ಕುರಿ ಬಲಿಕೊಟ್ಟು ಶಾಂತಿ ಮಾಡಿಸುವ ಪದ್ದತಿಯಿದೆ. ಆದರೆ ಅರಸೀಕೆರೆಯ ಪೊಲೀಸರು ಕೋಳಿ ಬಲಿ ಯಾಕೆ ಮಾಡಿಸಿದ್ರು ಯಾರಾದ್ರೂ ಎಡವಿ ಬಿದ್ದಿದ್ರಾ..? ಅಥವಾ ಜಿಲ್ಲೆಗೆ ಯಾರಾದ್ರೂ ಹೊಸಬರು ಬಂದ್ರಾ ...? ಎಂಬ ಪ್ರಶ್ನೆಗೆ ಕಾಕತಾಳಿಯ ಎಂಬಂತೆ ಜನರೂ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ :ನಾಲಿಗೆ ಕಟ್​ ಮಾಡಿ ದೇವಿಗೆ ಅರ್ಪಿಸಿದ 20 ವರ್ಷದ ಯುವತಿ!

Last Updated : Jun 30, 2022, 12:43 PM IST

ABOUT THE AUTHOR

...view details