ಕರ್ನಾಟಕ

karnataka

ETV Bharat / state

ಕೊರೊನಾ ನಿಯಮ ಮೀರಿ ಸುಖಾಸುಮ್ಮನೆ ಓಡಾಡುತ್ತಿದ್ದವರಿಗೆ ಬಸ್ಕಿ ಶಿಕ್ಷೆ - Hassan rules break

ಬೇಲೂರು ಪಟ್ಟಣದ ನೆಹರು ನಗರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅನಗತ್ಯ ಓಡಾಟ ಮಾಡುತ್ತಿದ್ದ ವಾಹನ ಸವಾರರಿಗೆ ಸರ್ಕಲ್‌ ಇನ್ಸ್​ಪೆಕ್ಟರ್ ಶ್ರೀಕಾಂತ ಬಸ್ಕಿ ಹೊಡೆಸಿ ಮತ್ತೆ ತಪ್ಪು ಮಾಡದಂತೆ ಎಚ್ಚರಿಕೆ ನೀಡಿದರು.

Beluru police punished who break the covid rules
Beluru police punished who break the covid rules

By

Published : May 1, 2021, 3:42 PM IST

Updated : May 1, 2021, 4:58 PM IST

ಹಾಸನ:ಅನಗತ್ಯವಾಗಿ ರಸ್ತೆಗಿಳಿದು ಕರ್ಫ್ಯೂ ರೂಲ್ಸ್ ಬ್ರೇಕ್ ಮಾಡಿದ ಜನರಿಗೆ ಕಪ್ಪೆ ಜಿಗಿತ ಶಿಕ್ಷೆ ನೀಡಿದ ಘಟನೆ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.

ಬೇಲೂರು ಪಟ್ಟಣದ ನೆಹರು ನಗರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅನಗತ್ಯ ಓಡಾಟ ಮಾಡುತ್ತಿದ್ದ ವಾಹನ ಸವಾರರಿಗೆ ಸರ್ಕಲ್‌ ಇನ್ಸಪೆಕ್ಟರ್ ಶ್ರೀಕಾಂತ, ಬಸ್ಕಿ ಹೊಡೆಸಿ ಮತ್ತೆ ತಪ್ಪು ಮಾಡದಂತೆ ಎಚ್ಚರಿಕೆ ನೀಡಿದರು.

ಕೊರೊನಾ ನಿಯಮ ಮೀರಿ ಸುಖಾಸುಮ್ಮನೆ ಓಡಾಡುತ್ತಿದ್ದವರಿಗೆ ಬಸ್ಕಿ ಶಿಕ್ಷೆ



ಮಹಿಳೆಯರಿಗೂ ಎಚ್ಚರಿಕೆ ನೀಡಿದ ಪೊಲೀಸರು, ಆಸ್ಪತ್ರೆ ನೆಪ ಹೇಳಿಕೊಂಡು ಇಬ್ಬಿಬ್ಬರು ಬಂದ್ರೆ ವಾಹನ ಸೀಜ್ ಮಾಡುವುದಾಗಿ ವಾರ್ನಿಂಗ್ ನೀಡಿ ಕಳುಹಿಸಿದ್ದಾರೆ.

ಇವತ್ತು ಬಸ್ಕಿ ಹೊಡೆಸಿದ್ದೇನೆ, ನಾಳೆಯಿಂದ ವಾಹನಗಳನ್ನು ಜಪ್ತಿ ಮಾಡಿ ಒಂದು ಸಾವಿರ ದಂಡ ಹಾಕ್ತೇನೆ ಎಂದು ಅನಗತ್ಯವಾಗಿ ಓಡಾಡುವವರಿಗೆ ಸರ್ಕಲ್‌ ಇನ್ಸ್​ಪೆಕ್ಟರ್ ಶ್ರೀಕಾಂತ ಎಚ್ಚರಿಕೆ ನೀಡಿದರು.

Last Updated : May 1, 2021, 4:58 PM IST

ABOUT THE AUTHOR

...view details