ಹಾಸನ: ಕಳೆದ ಮೂರು ದಿನಗಳ ಹಿಂದಷ್ಟೇ ಹಾಸನ ನಗರದ ಸಂತೇಪೇಟೆಯಲ್ಲಿರುವ ಪ್ರಿಯದರ್ಶಿನಿ ಬಾರ್‌ನಲ್ಲಿ ಕಳ್ಳತನ ಮಾಡಿ ಓರ್ವ ರೌಡಿಶೀಟರ್ ಸಿಕ್ಕಿಬಿದ್ದಿದ್ದ. ಈ ಪ್ರಕರಣದ ಬೆನ್ನಲ್ಲೇ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಬಸಟ್ಟಿಕೊಪ್ಪಲಿನ ವಾರ್ಡ್ ನಂಬರ್ 7ರಲ್ಲಿರುವ ಕಬಂದ ಬಾರ್‌ನಲ್ಲಿ ಕಳ್ಳತನವಾಗಿದೆ.
ಹಾಸನದಲ್ಲಿ ಮತ್ತೆ ಬಾರ್‌ನಲ್ಲಿ ಕಳ್ಳತನ: ಮಾಲೀಕರಲ್ಲಿ ಹೆಚ್ಚಿದ ಆತಂಕ - Bar theft reported in hassan city
ಲಾಕ್ಡೌನ್ ಹಿನ್ನೆಲೆಯಲ್ಲಿ ಬಾರ್‌ಗಳನ್ನು ತೆರೆಯುವುದಕ್ಕೆ ನಿರ್ಬಂಧವಿದೆ. ಹೀಗಾಗಿ ಬಾರ್ ಕಳ್ಳತನ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಇದೀಗ ಹಾಸನದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ವರದಿಯಾಗಿದೆ.
ಹಾಸನದಲ್ಲ್ಲಿಮತ್ತೆ ಬಾರ್ ಕಳ್ಳತನ, ಮಾಲೀಕರಲ್ಲಿ ಹೆಚ್ಚಿದ ಆತಂಕ
ಕಳೆದ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಬಾರ್ ಮಾಲೀಕರು ಎಂದಿನಂತೆ ಬಂದು ಪರಿಶೀಲನೆ ನಡೆಸಿ ಮನೆಗೆ ಹೋಗಿದ್ದರು. ಇಂದು ಬೆಳಗ್ಗೆ ಮತ್ತೆ ಪರಿಶೀಲನೆಗೆ ಬಂದ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಯವರು ರಾತ್ರಿ 11:30ರ ಸಮಯದಲ್ಲಿ ಜೋರಾಗಿ ಶಬ್ಧ ಬಂದಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿರುವುದಾಗಿ ಬಾರ್ ಮಾಲೀಕರು ತಿಳಿಸಿದ್ದಾರೆ.
ಲಾಕ್ಡೌನ್ನಿಂದ ನಗರದಲ್ಲಿ ಮತ್ತೊಂದು ಬಾರ್‌ನಲ್ಲಿ ಕಳ್ಳತನವಾಗಿರುವುದು ಬಾರ್ ಮಾಲೀಕರ ಆತಂಕ ಹೆಚ್ಚಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ.