ಹಾಸನ :ಇಂದು ಕೊರೊನಾ ವೈರಸ್ನ ವಿರುದ್ಧ ಇಡೀ ದೇಶವೇ ಹೋರಾಟ ನಡೆಸುತ್ತಿದ್ರೇ, ಹಾಸನ ಜಿಲ್ಲೆಯಲ್ಲಿ ಬಾರ್ ಮುಚ್ಚಿಸಲು ಪ್ರತಿಭಟನೆ ಮಾಡಬೇಕಾಗಿದೆ ಬಂದಿತು. ಸಂಸದ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಜಿಪಂ ಉಪಾಧ್ಯಕ್ಷರು, ನಗರಸಭೆ ಸದಸ್ಯರು ಸೇರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದರು.
ಲಾಕ್ಡೌನ್ ನಡುವೆಯೇ ಬಾರ್ ಓಪನ್.. ಸಂಸದ ಪ್ರಜ್ವಲ್ ರೇವಣ್ಣ ಪ್ರತಿಭಟನೆ.. - ಎ.ಎಸ್.ಪಿ ನಂದಿನಿ
ಭಾರತ ದೇಶವೇ ಲಾಕ್ಡೌನ್ ಆದೇಶದ ಹಿನ್ನೆಲೆ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಿಸಲಾಗಿತ್ತು. ನಗರದ ಬಿ ಎಂ ರಸ್ತೆ ಬಳಿ ಇರುವ ಕ್ವಾಲೀಟಿ ಬಾರ್‌ನ ಹಿಂದಿನ ಬಾಗಿಲು ತೆಗೆದು ಮಾರಾಟ ಮಾಡಲು ಸಾಗಿಸಲಾಗುತ್ತಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರು ಆರೋಪಿಸಿ ಪ್ರತಿಭಟನೆ ಆರಂಭಿಸಿದರು.

ಸ್ಥಳಕ್ಕೆ ಆಗಮಿಸಿದ ಎಎಸ್‌ಪಿ ನಂದಿನಿ ಮತ್ತು ಡಿವೈಎಸ್ಪಿ ಪುಟ್ಟಸ್ವಾಮೀಗೌಡರು ಹಾಗೂ ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರನ್ನು ಸ್ಥಳದಿಂದ ಹೊರ ಹೋಗುವಂತೆ ಸೂಚಿಸಿದ್ದಕ್ಕೆ ಕುಪಿತರಾದ ಸಂಸದ ಪ್ರಜ್ವಲ್ ರೇವಣ್ಣ, ಎಎಸ್‌ಪಿ ನಂದಿನಿ ವಿರುದ್ಧ ಹರಿಹಾಯ್ದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.