ಕರ್ನಾಟಕ

karnataka

ETV Bharat / state

ಸಾರಿಗೆ ಬಸ್​ನಲ್ಲಿ ನಿಷೇಧಿತ 2 ಬಾಕ್ಸ್ ಔಷಧಿ ಬಾಕ್ಸ್ ಪತ್ತೆ

ಸೆ. 3 ರಂದು ಖಚಿತ ಮಾಹಿತಿ ಮೇರೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಹಾಗೂ ಬಡಾವಣೆ ಠಾಣೆ ಸಿಬ್ಬಂದಿ ಹೊಸ ಬಸ್ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಉಡುಪಿಯಿಂದ ಹಾಸನಕ್ಕೆ ಸರಬರಾಜಾಗುತ್ತಿದ್ದ ಎರಡು ಬಾಕ್ಸ್‌ಗಳಲ್ಲಿ ನಿಷೇಧಿತ ಔಷಧಿ ಪತ್ತೆಯಾಗಿತ್ತು.

ನಿಷೇಧಿತ 2 ಬಾಕ್ಸ್ ಔಷಧಿ ಬಾಕ್ಸ್ ಪತ್ತೆ
ನಿಷೇಧಿತ 2 ಬಾಕ್ಸ್ ಔಷಧಿ ಬಾಕ್ಸ್ ಪತ್ತೆ

By

Published : Sep 8, 2020, 1:33 AM IST

ಹಾಸನ: ಉಡುಪಿಯಿಂದ -ಬೆಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ನಿಷೇಧಿತ 2 ಬಾಕ್ಸ್ ಔಷಧಿ ಬಾಕ್ಸ್ ಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೆಆರ್‌ಪುರಂ ಪೊಲೀಸರ ಕಾರ್ಯಾಚರಣೆಯಿಂದ ಬಯಲಾಗಿದೆ.

ಸೆ. 3 ರಂದು ಖಚಿತ ಮಾಹಿತಿ ಮೇರೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಹಾಗೂ ಬಡಾವಣೆ ಠಾಣೆ ಸಿಬ್ಬಂದಿ ಹೊಸ ಬಸ್ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಉಡುಪಿಯಿಂದ ಹಾಸನಕ್ಕೆ ಸರಬರಾಜಾಗುತ್ತಿದ್ದ ಎರಡು ಬಾಕ್ಸ್‌ಗಳಲ್ಲಿ ನಿಷೇಧಿತ ಔಷಧಿ ಪತ್ತೆಯಾಗಿತ್ತು. ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯಿಂದ ರಾಜ್ಯದ ವಿಭಾಗ ನಿಯಂತ್ರಣಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗಿದ್ದು, ವಾರಸುದಾರರಿಲ್ಲದೆ ಲಗೇಜು ಸಾಗಿಸುವಾಗ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಸಾರಿಗೆ ಬಸ್​ನಲ್ಲಿ ನಿಷೇಧಿತ 2 ಬಾಕ್ಸ್ ಔಷಧಿ ಬಾಕ್ಸ್ ಪತ್ತೆ

ಲಗೇಜುಗಳಲ್ಲಿ ಮಾದಕ ವಸ್ತುಗಳು, ನಿಷಿದ್ಧ ವಸ್ತುಗಳು ಇರುವ ಬಗ್ಗೆ ಪರಿಶೀಲಿಸಿದ ನಂತರ ಲಗೇಜ್ ತೆಗೆದುಕೊಂಡು ಹೋಗಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

ABOUT THE AUTHOR

...view details