ಕರ್ನಾಟಕ

karnataka

ETV Bharat / state

ಎಸ್​​ಡಿಪಿಐ-ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ: ವಿಹೆಚ್​​ಪಿ, ಬಜರಂಗದಳ ಆಗ್ರಹ - ವಿಎಚ್​​ಪಿ, ಬಜರಂಗದಳ ಕಾರ್ಯಕರ್ತರ ಆಗ್ರಹ

ವಿಶ್ವ ಹಿಂದೂ ಪರಿಷತ್ ಹಾಸನ ಜಿಲ್ಲಾ ಉಪಾಧ್ಯಕ್ಷ ಕೆ. ಶಾಮಸುಂದರ್ ಮಾತನಾಡಿ, ಪೊಲೀಸ್ ಠಾಣೆ ಹಾಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿದ ಪುಂಡರನ್ನು ಗುಂಡಿಟ್ಟು ಕೊಲ್ಲಬೇಕು. ಸಂವಿಧಾನವನ್ನು ಕೈಗೆತ್ತಿಕೊಂಡು ಗಲಭೆ ಮಾಡಿದವರು ಹಾಗೂ ಗಲಭೆಗೆ ಪ್ರಚೋದನೆ ನೀಡಿದವರನ್ನು ನೇಣಿಗೇರಿಸಬೇಕು ಎಂದು ಆಗ್ರಹಿಸಿದರು.

Ban SDPI and PFI organizations Bajrang Dal activists demand
ಎಸ್​​ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ: ವಿಎಚ್​​ಪಿ, ಬಜರಂಗದಳ ಕಾರ್ಯಕರ್ತರ ಆಗ್ರಹ

By

Published : Aug 14, 2020, 3:22 PM IST

ಚನ್ನರಾಯಪಟ್ಟಣ:ತಾಲೂಕಿನಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಮಿನಿ ವಿಧಾನಸೌಧದ ಮುಂದೆ ಧರಣಿ ನಡೆಸಿ ರಾಜ್ಯ ಮತ್ತು ದೇಶದಲ್ಲಿ ಎಸ್​ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿದರು.

ಎಸ್​​ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ: ವಿಹೆಚ್​​ಪಿ, ಬಜರಂಗದಳ ಆಗ್ರಹ

ವಿಶ್ವ ಹಿಂದೂ ಪರಿಷತ್ ಹಾಸನ ಜಿಲ್ಲಾ ಉಪಾಧ್ಯಕ್ಷ ಕೆ. ಶಾಮಸುಂದರ್ ಮಾತನಾಡಿ, ಪೊಲೀಸ್ ಠಾಣೆ ಹಾಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿದ ಪುಂಡರನ್ನು ಗುಂಡಿಟ್ಟು ಕೊಲ್ಲಬೇಕು. ಸಂವಿಧಾನವನ್ನು ಕೈಗೆತ್ತಿಕೊಂಡು ಗಲಭೆ ಮಾಡಿದವರು ಹಾಗೂ ಗಲಭೆಗೆ ಪ್ರಚೋದನೆ ನೀಡಿದವರನ್ನು ನೇಣಿಗೇರಿಸಬೇಕು ಎಂದು ಆಗ್ರಹಿಸಿದರು.

ಬಜರಂಗದಳದ ತಾಲೂಕು ಸಂಚಾಲಕ ಮಧುಗೌಡ ಮಾತನಾಡಿ, ಸಂವಿಧಾನ ವಿರೋಧಿ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ಹಲವು ಟಿವಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಹಾಗೂ 70ಕ್ಕೂ ಹೆಚ್ಚು ಪೊಲೀಸರಿಗೆ ಗಾಯ ಮಾಡಿದವರು ಭಯೋತ್ಪಾದಕರೆಂದು ಪರಿಗಣಿಸಿ ಸಾರ್ವಜನಿಕವಾಗಿ ನೇಣು ಹಾಕುವ ಮೂಲಕ ರಾಜ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಪಾಠ ಕಲಿಸಬೇಕು ಎಂದರು. ನಂತರ ತಹಶಿಲ್ದಾರ್ ಜೆ.ಬಿ.ಮಾರುತಿ ಅವರಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details