ಸಕಲೇಶಪುರ (ಹಾಸನ):'ನಾನು ಆರ್ಎಸ್ಎಸ್ ಕಾರ್ಯಕರ್ತ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಜರಂಗದಳದ ಕಾರ್ಯಕರ್ತರು ಭಿತ್ತಿ ಪತ್ರಗಳನ್ನು ತೋರಿಸಿ ಟಾಂಗ್ ನೀಡಿರುವ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ.
ಹೆಚ್ಡಿಕೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ವಿರುದ್ಧ ಹೇಳಿಕೆಗಳನ್ನು ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇಂದು ಸಕಲೇಶಪುರ ತಾಲೂಕಿನ ಎತ್ತಿನಹೊಳೆ ಕಾಮಗಾರಿಯನ್ನು ವೀಕ್ಷಿಸಲು ಕುಮಾರಸ್ವಾಮಿ ಬಂದಿದ್ದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಹೊರ ಬಂದು ಕಾರಿನಲ್ಲಿ ಎತ್ತಿನಹೊಳೆ ಕಾಮಗಾರಿ ವೀಕ್ಷಿಸಲು ಹೊರಟ ಸಂದರ್ಭದಲ್ಲಿ ಎಸ್.ಬಿ.ಎಮ್ ವೃತ್ತದ ಸಮೀಪ ಬಜರಂಗದಳ ಕಾರ್ಯಕರ್ತರು 'ನಾನು ಆರ್ಎಸ್ಎಸ್ ಕಾರ್ಯಕರ್ತ' ಎಂದು ಬರೆದಿರುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ್ದಾರೆ.