ಹಾಸನ/ಅರಕಲಗೂಡು: ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು. ಇಲ್ಲದಿದ್ದರೆ ಕಾನೂನಿನ ಪ್ರಕಾರ ದಂಡ ವಿಧಿಸುವುದಲ್ಲದೇ ವಾಹನ ಮತ್ತು ಪರವಾನಗಿಯನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ ಎಂದು ತಹಶೀಲ್ದಾರ್ ರೇಣುಕುಮಾರ್ ಎಚ್ಚರಿಸಿದ್ದಾರೆ.
ಹಾಸನದಲ್ಲಿ ಕೊರೊನಾ ಮತ್ತು ಹೆಲ್ಮೆಟ್ ಕುರಿತು ಜಾಗೃತಿ ಜಾಥಾ - ಕೊರೊನಾ ಮತ್ತು ಹೆಲ್ಮೆಟ್ ಕುರಿತು ಜಾಗೃತಿ ಜಾಥಾ
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು. ಇಲ್ಲದಿದ್ದರೆ ಕಾನೂನಿನ ಪ್ರಕಾರ ದಂಡ ವಿಧಿಸುವುದಲ್ಲದೇ ವಾಹನ ಮತ್ತು ಪರವಾನಗಿಯನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ ಎಂದು ತಹಶೀಲ್ದಾರ್ ರೇಣುಕುಮಾರ್ ಎಂದು ಎಚ್ಚರಿಸಿದರು.
ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ನಡೆದ ಕೊರೊನಾ ಮತ್ತು ಹೆಲ್ಮೆಟ್ ಕಡ್ಡಾಯ ಜಾಗೃತಿ ಜಾಥಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ವಿಶ್ವದಲ್ಲಿ ಹೆಮ್ಮಾರಿಯಾಗಿ ಕಾಡುತ್ತಿರುವ ಕೊರೊನಾ ತಡೆಗಟ್ಟಲು ನೀವು ಸನ್ನದ್ಧರಾಗಬೇಕು. ಪ್ರತಿನಿತ್ಯ ಶುಭ್ರವಾಗಿದ್ದು, ವೈರಾಣು ಹೊಂದಿರುವ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಬೇಕು. ಊಟಕ್ಕೆ ಮುನ್ನ ಕೈ ಮತ್ತು ಕಾಲು, ಬಾಯಿ ತೊಳೆದು ಆಹಾರ ಸೇವಿಸಬೇಕು. ಕೆಮ್ಮು, ನೆಗಡಿ, ಶೀತವಿದ್ದ ತಕ್ಷಣ ಸಮೀಪದ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ರೋಗಾಣು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಅಲ್ಲದೇ ನಿಮ್ಮನ್ನು ನಂಬಿಕೊಂಡು ಕುಟುಂಬವಿದ್ದು, ದಿನದಿಂದ ದಿನಕ್ಕೆ ದ್ವಿಚಕ್ರ ವಾಹನಗಳ ಅಪಘಾತಗಳು ಹೆಚ್ಚಾಗುತ್ತಿದೆ. ಅವರ ರಕ್ಷಣೆಯ ಜೊತೆಗೆ ನಿಮ್ಮ ಜೀವನದ ರಕ್ಷಣೆಗಾಗಿ ತಪ್ಪದೇ ವಾಹನ ಚಲಾಯಿಸುವಾಗ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಹಾಕಿಕೊಳ್ಳುವುದು ಉತ್ತಮ. ಹಾಗಾಗಿ ಪ್ರತಿನಿತ್ಯ ತಪ್ಪದೇ ಇದನ್ನ ಪಾಲಿಸಿ. ಇಲ್ಲದಿದ್ದರೆ ನಿಮ್ಮ ಜೀವನಕ್ಕೆ ಕುತ್ತು ತಂದುಕೊಳ್ಳಬೇಕಾಗುತ್ತದೆ ಎಂದು ದ್ವಿಚಕ್ರ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಅರಿವು ಮೂಡಿಸಿದ್ರು. ಈ ಸಂದರ್ಭದಲ್ಲಿ ಪಿಎಸ್ಐ ವಿಜಯ್ ಕೃಷ್ಣ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.