ಹಾಸನ :ಹಿಮ್ಸ್ ವೈದ್ಯನ ಕರ್ಮಕಾಂಡ ಬಯಲಿಗೆ ಬಂದಿದೆ. ತರಬೇತಿ ನಿರತ ವೈದ್ಯೆಗೆ ಮುತ್ತು ಕೊಟ್ಟಿದ್ದಾರೆ ಎಂದು ಹಾಸನದ ಹಿಮ್ಸ್ ಸಹಾಯಕ ಪ್ರಾಧ್ಯಾಪಕನ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.
ವೈದ್ಯ ಪದವಿ ಪೂರೈಸಿ ತರಬೇತಿಯಲ್ಲಿದ್ದ ವೈದ್ಯ ವಿದ್ಯಾರ್ಥಿನಿಗೆ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ನಾನು ಲಿಫ್ಟ್‌ನಲ್ಲಿ ತೆರಳುವ ವೇಳೆ ವೈದ್ಯ ಏಕಾಏಕಿ ಮುತ್ತು ನೀಡಿದ್ದಾಗಿ ಹಾಸನ ವೈದ್ಯಕೀಯ ಸಂಸ್ಥೆಗೆ ಸಂತ್ರಸ್ತೆ ದೂರು ನೀಡಿದ್ದಾರೆ.
ಓದಿ:ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆ.. ಜ 31ಕ್ಕೆ ಸಂಸತ್ ಅಧಿವೇಶನ ಶುರು
ದೂರು ನೀಡಿದ ಬಳಿಕ ಕರ್ತವ್ಯನಿರತ ಮಹಿಳಾ ಹೌಸ್ ಡಾಕ್ಟರ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ವೈದ್ಯನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಿಮ್ಸ್ ವೈದ್ಯಶಾಸ್ತ್ರ ವಿಭಾಗದಲ್ಲಿ ಇವರು ಸಹ ಪ್ರಾದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.