ಕರ್ನಾಟಕ

karnataka

ETV Bharat / state

ಗೋಹತ್ಯೆ ತಡೆದ ಭಜರಂಗ ದಳ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ..! - ಗೋಹತ್ಯೆ ತಡೆಯಲು ಹೋದ ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ

ಗೋಹತ್ಯೆ ತಡೆಯಲು ಹೋದ ಭಜರಂಗದಳದ ಕಾರ್ಯಕರ್ತರಿಗೆ ಗುಂಪೊಂದು ತೀವ್ರ ಹಲ್ಲೆ ನಡೆಸಿದ್ದು, ಕಾರೊಂದನ್ನು ಜಖಂಗೊಳಿಸಿದ್ದಾರೆ.

Assault on Bajrang Dal activists
ಗೋಹತ್ಯೆ ತಡೆಯಲು ಹೋದ ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ

By

Published : Aug 2, 2020, 11:00 PM IST

ಸಕಲೇಶಪುರ (ಹಾಸನ): ಗೋಹತ್ಯೆ ತಡೆಯಲು ಹೋದ ಭಜರಂಗದಳದ ಕಾರ್ಯಕರ್ತರ ಮೇಲೆ ಜನರ ಗುಂಪು ತೀವ್ರ ಹಲ್ಲೆ ನಡೆಸಿ ಕಾರೊಂದನ್ನು ಜಖಂಗೊಳಿಸಿರುವ ಘಟನೆ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಗೋವೊಂದನ್ನು ವಧಿಸಲು ಕೆಲವರು ಕಟ್ಟಿ ಹಾಕಿದ್ದು, ಈ ಹಿನ್ನೆಲೆಯಲ್ಲಿ ಭಜರಂಗದಳ ಕಾರ್ಯಕರ್ತರು ನಗರ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಪೊಲೀಸರು ಬರುವುದು ತುಸು ತಡವಾದ ಹಿನ್ನೆಲೆಯಲ್ಲಿ, ಆಗಮಿಸಿದ ಗ್ರಾಮದ ಗುಂಪೊಂದು ಭಜರಂಗದಳದ ನಾಲ್ವರು ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಮೊಬೈಲ್ ಹಾಗೂ ಆಲ್ಟೋ ಕಾರೊಂದನ್ನು ಜಖಂಗೊಳಿಸಿದ್ದಾರೆ‌.

ಗೋಹತ್ಯೆ ತಡೆಯಲು ಹೋದ ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ

ದಿಲೀಪ್, ರಘು, ಯೋಗೇಂದ್ರ ಹಾಗೂ ಶೇಖರ್ ಪೂಜಾರಿ ಎಂಬುವರು ಹಲ್ಲೆಗೊಳಗಾದ ಕಾರ್ಯಕರ್ತರಾಗಿದ್ದು, ಶೇಖರ್ ಪೂಜಾರಿ ಎಂಬುವರ ಬಲ ಕಿವಿಗೆ ತೀವ್ರ ಪೆಟ್ಟು ಬಿದ್ದಿದ್ದು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

ನಗರ ಠಾಣೆ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಘಟನೆ ಉಂಟಾಗಿದ್ದು, ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಜರಂಗದಳದ ಕಾರ್ಯಕರ್ತರು ನಗರ ಠಾಣೆ ಮುಂದೆ ಸಂಜೆಯ ವೇಳೆ ಪ್ರತಿಭಟನೆ ಮಾಡಲು ಮುಂದಾದರು. ಈ ಹಿನ್ನೆಲೆಯಲ್ಲಿ ಡಿವೈಎಸ್​​ಪಿ ಗೋಪಿ ಹಾಗೂ ಸರ್ಕಲ್ ಇನ್ಸ್​​ಪೆಕ್ಟರ್ ಗಿರೀಶ್ ಸಂಘಟನೆಯ ಮುಖಂಡರನ್ನು ಸಮಾಧಾನಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಹಲ್ಲೆ ನಡೆಸಿದ ಒಟ್ಟು 9 ಮಂದಿಯ ಮೇಲೆ ಸಕಲೇಶಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details