ಹಾಸನ: ಹೊಲದಲ್ಲಿ ಮೇಯುತ್ತಿದ್ದ ಹಸು ಕಳ್ಳತನಕ್ಕೆ ಯತ್ನಿಸಿ ಗ್ರಾಮಸ್ಥರಿಂದ ಧರ್ಮದೇಟು ತಿಂದು, ಸದ್ಯ ಪೊಲೀಸರ ಅತಿಥಿಯಾಗಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಂಚೆಕೊಪ್ಪಲಿನಲ್ಲಿ ನಡೆದಿದೆ.
ಪಕ್ಕದ ಮಲ್ಲೇನಹಳ್ಳಿ ಗ್ರಾಮದ ಧನು ಎಂಬಾತನನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದು, ಈತನ ಮೇಲೆ ಬರೋಬ್ಬರಿ 80 ಕಳ್ಳತನ ಆರೋಪಗಳಿವೆ.