ಹಾಸನ:ಜಮೀನು ವ್ಯಾಜ್ಯ ಪ್ರಕರಣವೊಂದರಲ್ಲಿ ಸಾಕ್ಷ್ಯ ಹೇಳಲು ಕೋರ್ಟ್‌ಗೆ ಹಾಜರಾಗದ ಹಾಸನ ತಹಶೀಲ್ದಾರ್ ಶ್ವೇತಾ ವಿರುದ್ಧ ಸಿಟಿ ಸಿವಿಲ್ ಕೋರ್ಟ್ ಬಂಧನ ವಾರಂಟ್ ಹೊರಡಿಸಿದೆ. ಶ್ವೇತಾ ಅವರನ್ನು ಕರೆದುಕೊಂಡು ಹೋಗಲು ಗುರುವಾರ ಕೋರ್ಟ್ ಸಿಬ್ಬಂದಿ ಮತ್ತು ವಕೀಲರು ಕಚೇರಿಗೆ ಆಗಮಿಸಿದ್ದರು. ಆದರೆ ಶ್ವೇತಾ ಕಚೇರಿಯಲ್ಲಿರಲಿಲ್ಲ.
ಪ್ರಕರಣವೇನು?:ಹಾಸನ ತಾಲೂಕಿನ ಹೇಮಾ ಎಂಬವರ ಭೂಮಿ 6/1 ಭಾಗಕ್ಕೆ ಆದೇಶವಾಗಿದ್ದು, ನಂತರ ಹದ್ದುಬಸ್ತ್‌ಗಾಗಿ ಸ್ವಾಧೀನ ಮಾಡಬೇಕು ಎಂದು ಕೋರ್ಟ್ ಆದೇಶಿಸಿತ್ತು. 2014ರಿಂದ ಇಲ್ಲಿವರೆಗೂ ಈ ಕುರಿತು ಲಿಖಿತ ರೂಪದಲ್ಲಿ ಕಡತವಾಗಿರಲಿಲ್ಲ. ತಹಶೀಲ್ದಾರ್ ಈ ರೀತಿ ನಿರ್ಲಕ್ಷ್ಯವಹಿಸಿದರೆ ರೈತರ ಕಥೆ ಏನಾಗಬೇಕು?, ಪ್ರಕರಣ ದಾಖಲು ಮಾಡಿದ ನಂತರ ಇಬ್ಬರೂ ಸಾವನ್ನಪ್ಪಿದ್ದಾರೆ. ಇನ್ನೆಷ್ಟು ಜನ ಸಾಯಬೇಕು? 2008ರಿಂದ ಇಲ್ಲಿಯವರೆಗೂ ಎಷ್ಟು ಹದ್ದುಬಸ್ತ್ ಮತ್ತು ದುರಸ್ತಿ ಮಾಡಿದ್ದಾರೆ, ಲೆಕ್ಕ ಕೊಡಲಿ ಎಂದು ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಹಾಸನ ಸಿಟಿ ಸಿವಿಲ್ ಕೋರ್ಟ್ ಜಮೀನು ಹದ್ದುಬಸ್ತ್ ಕುರಿತು ಸಾಕ್ಷ್ಯ ಹೇಳಲು ಕೋರ್ಟ್‌ಗೆ ಆಗಮಿಸದ ತಹಶೀಲ್ದಾರ್‌ರನ್ನು ಬಂಧಿಸುವಂತೆ ಆದೇಶ ಮಾಡಿದೆ. ಹೀಗಾಗಿ ಗುರುವಾರ ವಾರಂಟ್ ಸಮೇತ ತಾಲೂಕು ಕಚೇರಿಗೆ ವಕೀಲ ಎಸ್.ಎನ್.ಮೂರ್ತಿ ನೇತೃತ್ವದಲ್ಲಿ ಕೋರ್ಟ್ ಸಿಬ್ಬಂದಿ ಬಂದಿದ್ದಾರೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಕಾಣಿಸಿಕೊಳ್ಳಲಿಲ್ಲ.