ಕರ್ನಾಟಕ

karnataka

ETV Bharat / state

ಭಿಕ್ಷುಕಿ ಕೊಲೆಗೈದು ಅತ್ಯಾಚಾರ: ಆರೋಪಿ ಬಂಧಿಸುವಂತೆ ಆಗ್ರಹ - ಹಾಸನ ಅತ್ಯಾಚಾರ ಪ್ರಕರಣ

ಹಾಸನ ನಗರದಲ್ಲಿ ಭಿಕ್ಷುಕಿ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಶೀಘ್ರವೇ ಬಂಧಿಸಬೇಕೆಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

arrest the rape accused in hassan
ಆರೋಪಿ ಬಂಧಿಸುವಂತೆ ಆಗ್ರಹ

By

Published : Aug 28, 2020, 10:25 PM IST

ಹಾಸನ: ಭಿಕ್ಷುಕಿಯನ್ನು ಕೊಲೆಗೈದು, ಅತ್ಯಾಚಾರವೆಸಗಿರುವ ವಿಕೃತ ಘಟನೆಯನ್ನು ಖಂಡಿಸಿ, ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಆರ್.ಗಿರೀಶ್​​ರವರಿಗೆ ಮನವಿ ಸಲ್ಲಿಸಲಾಯಿತು.

ಆರೋಪಿ ಬಂಧಿಸುವಂತೆ ಆಗ್ರಹ

ನಗರದ ಹೃದಯ ಭಾಗದ ಎನ್.ಆರ್.ವೃತ್ತದ ಬಳಿ ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಇಂತಹ ವಿಕೃತ ಕಾಮುಕನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಈ ಕೊಲೆಯ ನಂತರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಇದು ಮಾನವ ಸಮಾಜವೇ ತಲೆ ತಗ್ಗಿಸುವಂತೆ ಕೃತ್ಯ. ಸಂಬಂಧಪಟ್ಟ ಅಧಿಕಾರಿಗಳು ಬಿಕ್ಷುಕರಿಗೆ ಕೂಡಲೇ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಜತೆಗೆ ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚುವರಿಯಾಗಿ ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ABOUT THE AUTHOR

...view details