ಹಾಸನ :ಶನಿವಾರ ರಾತ್ರಿ ಅರಳೀಕಟ್ಟೆ ಸರ್ಕಲ್ನಲ್ಲಿ ನಡೆದ ಕೊಲೆ ಪ್ರಕರಣವನ್ನ ನಾಲ್ಕು ದಿನದಲ್ಲಿ ಬೇಧಿಸುವಲ್ಲಿ ಹಾಸನದ ಪೊಲೀಸರು ಯಶಸ್ವಿಯಾಗಿದ್ದಾರೆ.
ಭವಿತ್ ಅಲಿಯಾಸ್ ಗುಡ್ಡಿ (19), ತೇಜಸ್ ಅಲಿಯಾಸ್ ಲೋಕಿ(19), ಪುನೀತ್ ಅಲಿಯಾಸ್ ಬಣ್ಣ (21), ನವೀನ್ ಅಲಿಯಾಸ್ ಚಿನ್ನ (21), ವಿವೇಕ ಅಲಿಯಾಸ್ ಸೊಳ್ಳೆ ಅಲಿಯಾಸ್ ಬೊಂಡಾ (24) ಬಂಧಿತ ಆರೋಪಿಗಳು.
ನಗರದ ಅರಳೀಕಟ್ಟೆ ವೃತ್ತದ ಬಳಿಯಿರುವ ಜೆಪಿ ಟೀ ಸ್ಟಾಲ್‌ನಲ್ಲಿ ರಘುಗೌಡ ಎಂಬುವನನ್ನು 5 ಮಂದಿ ಸೇರಿ ಬರ್ಬರವಾಗಿ ಕೊಲೆ ಮಾಡಿದ್ದರು. ಕೊಲೆಯ ಆರೋಪಿಗಳು ಯಾರು ಎಂಬುದು ಗೊತ್ತಾಗಿರಲಿಲ್ಲ. ಹೀಗಾಗಿ ಟೀ ಅಂಗಡಿಯ ಸಮೀಪವಿದ್ದ, ಸಿಸಿಟಿವಿ ದೃಶ್ಯಾವಳಿ ಕಲೆಹಾಕಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ರು.
ಓದಿ: ಹಾಸನ:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ
ನನ್ನ ಮಗನ ರೀತಿಯೇ ಕೊಚ್ಚಿ ಹಾಕಬೇಕು : ಮಗನನ್ನ ಕಳೆದುಕೊಂಡ ತಂದೆಯ ರೋಧನೆ ಮುಗಿಲು ಮುಟ್ಟಿತ್ತು. ಹಣಕೊಡದಿದ್ದರೆ ನನ್ನ ಬಳಿ ಬಂದು ಕೇಳ ಬೇಕಿತ್ತು. ಅದರ ಬದಲು ಆತನನ್ನ ಕೊಲೆ ಮಾಡುವುದು ಎಷ್ಟು ಸರಿ? ನನ್ನ ಮಗ ಮನೆ ಕಟ್ಟಿ ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದ.
ಆದ್ರೆ, ಮದುವೆಗೆ ಮುನ್ನವೇ ನನ್ನ ಮಗನನ್ನ ಕೊಚ್ಚಿ ಕೊಲೆಮಾಡಿ ಚಟ್ಟ ಕಟ್ಟಿಬಿಟ್ಟರು. ನನ್ನ ಮಗನ ಸ್ಥಿತಿಗೆ ಕಾರಣರಾದ ಅವರುಗಳನ್ನ ಅದೇ ರೀತಿಯೇ ಕೊಚ್ಚಿ ಕೊಲೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಲೆಯ ಹಿಂದೆ ಕುಮ್ಮಕ್ಕಿದೆ: ಇನ್ನು ಇವರುಗಳು ಕೇವಲ ನೆಪ ಮಾತ್ರ. ಆದ್ರೆ, ನನ್ನ ಅಣ್ಣನನ್ನ ಕೊಲೆ ಮಾಡಿಸಿರುವವರು ಬೇರೆಯವರು ಇದ್ದಾರೆ. ಕೊಲೆ ಮಾಡುವಷ್ಟು ಇವರು ಧೈರ್ಯವಂತರಲ್ಲ. ಸುಫಾರಿ ನೀಡಿ ಕೊಲೆ ಮಾಡಿಸಿದ್ದಾರೆ. ಇದರ ಬಗ್ಗೆ ಮತ್ತೆ ತನಿಖೆಯಾಗಬೇಕು ಎನ್ನುತ್ತಾರೆ ಸಹೋದರ ಯಶ್ವಂತ್.
ನನ್ನ ತಮ್ಮ ಚಿನ್ನದಂತವ :ನನ್ನ ತಮ್ಮ ಚಿನ್ನದಂತವ. ಅವನು ಯಾರಿಗೂ ಕೇಡು ಬಯಸಿದವನಲ್ಲ. ಆದ್ರೆ, ಈ ನಾಲ್ಕು ಮಂದಿ ಸಾಲಕ್ಕಾಗಿ ಕೊಲೆ ಮಾಡಿದ್ದು, ನಿಜಕ್ಕೂ ನಮಗೆ ದುಃಖವನ್ನ ತಡೆಯಲು ಸಾಧ್ಯವಾಗುತ್ತಿಲ್ಲ.
ನನ್ನ ತಮ್ಮನ ಸಾವಿಗೆ ಕಾರಣರಾದವರಿಗೆ ಮರಣ ದಂಡನೆಯ ಶಿಕ್ಷೆ ಕೊಡಬೇಕು. ಇಲ್ಲ, ಸಾಯುವ ತನಕ ಜೈಲಿನಲ್ಲಿಯೇ ಇರುವಂತೆ ಮಾಡಬೇಕು. ನಮ್ಮ ಕುಟುಂಬಕ್ಕೆ ಬಂದ ರೀತಿ ಅವರ ಕುಟುಂಬಕ್ಕೂ ಬಂದಾಗ ಆ ನೋವು ಗೊತ್ತಾಗುತ್ತೆ ಎಂದರು.