ಕರ್ನಾಟಕ

karnataka

ETV Bharat / state

ಮಂಗಗಳ ಮಾರಣಹೋಮ ಮಾಡಿದ್ದ 5 ಕ್ರೂರಿಗಳ ಬಂಧನ.. ಕೃತ್ಯಕ್ಕೆ ಕಾರಣವೇನು ಗೊತ್ತಾ..! - ವಿಷ ಹಾಕಿ ಕೋತಿ ಸಾಯಿಸಿದ್ದ ಆರೋಪಿಗಳ ಬಂಧನ

ಮಂಗಗಳಿಗೆ ವಿಷ ಹಾಕಿ ಕೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಉಗನೆ ಗ್ರಾಮಸ್ಥರಿಂದ ಹಣ ಪಡೆದು ಕೋತಿಗಳನ್ನು ಕೊಂದಿದ್ದಾಗಿ ತನಿಖೆ ವೇಳೆ ತಿಳಿದು ಬಂದಿದೆ. ವನ್ಯಜೀವಿ ಸಂರಕ್ಷಣ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

arrest-accused-of-poisoning-monkey-in-hassan
ಕೋತಿಗಳಿಗೆ ವಿಷಪ್ರಾಶನ ಪ್ರಕರಣ

By

Published : Aug 2, 2021, 9:48 PM IST

Updated : Aug 3, 2021, 8:42 AM IST

ಹಾಸನ: ಆಹಾರ ಅರಸಿ ಬಂದ ಕೋತಿಗಳಿಗೆ ವಿಷಪ್ರಾಶನ ಮಾಡಿಸಿ ಕೊಂದು ಚೀಲದಲ್ಲಿ ತುಂಬಿ ಬಿಸಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.

40ಕ್ಕೂ ಮಂಗಗಳನ್ನು ಸಾಯಿಸಿ ಚೀಲದಲ್ಲಿ ತುಂಬಿ ಅಮಾನುಷವಾಗಿ ಬಿಸಾಡಿದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಕುಶಾವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡನಹಳ್ಳಿ ಗ್ರಾಮದ ಸಮೀಪ ನಡೆದಿತ್ತು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ತ ಹಾಗೂ ಜೀವಂತವಿದ್ದ ಮಂಗಗಳನ್ನು ಪರಿಶೀಲಿಸಿ, ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಅಲ್ಲದೇ, ವಿಷಯ ತಿಳಿದ ಉಚ್ಛ ನ್ಯಾಯಾಲಯ ಸ್ವಹಿತಾಸಕ್ತಿಯಿಂದ ಪ್ರಕರಣ ದಾಖಲಿಸಿಕೊಂಡಿತ್ತು. ಹಾಗೂ ಅರಣ್ಯ ಮತ್ತು ಕಂದಾಯ ಇಲಾಖೆ ಒಟ್ಟಾಗಿ ಸೇರಿ ಕ್ರಮ ತೆಗೆದುಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿತ್ತು.

ಮಂಗಗಳ ಮಾರಣಹೋಮ ಮಾಡಿದ್ದ 5 ಮಂದಿ ಕ್ರೂರಿಗಳ ಬಂಧನ

ಓದಿ-ಹಾಸನ ಮಂಗಗಳ ಮಾರಣಹೋಮ ಪ್ರಕರಣ: ತನಿಖೆಯಲ್ಲಿ ಬಯಲಾಯ್ತು ಸಾವಿನ ರಹಸ್ಯ

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಕೋರ್ಟ್ ಸೂಚನೆ ನೀಡಿದಂತೆ ಆ.4ರೊಳಗೆ ವರದಿ ಸಲ್ಲಿಸಬೇಕಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖರನ್ನ ಈಗಾಗಲೇ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ರಾಮು, ಮಂಜು, ಯಶೋಧಾ, ರಾಜೇಗೌಡ ಮತ್ತು ರುದ್ರೇಗೌಡ ಎಂದು ಗುರುತಿಸಲಾಗಿದೆ.

ವನ್ಯ ಜೀವಿ ಸಂರಕ್ಷಣ ಕಾಯ್ದೆ ಅಡಿ ಐವರನ್ನು ಬಂಧಿಸಲಾಗಿದೆ. ಚಿರತೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆ ಅಷ್ಟೇ ಪ್ರಾಮುಖ್ಯತೆಯನ್ನು ಮಂಗಗಳಿಗೂ ನೀಡಲಾಗುತ್ತದೆ. ಬಂಧಿತರು ಉಗನೆ ಗ್ರಾಮದವರಿಂದ ಹಣಪಡೆದು ಕೋತಿಗಳ ಸೆರೆ ಹಿಡಿದು ಕೊಂದಿದ್ದರು ಎಂದು ತನಿಖೆ ವೇಳೆ ತಿಳಿದಿದೆ. ಆರೋಪಿಗಳಿಂದ ಹೆಚ್ಚಿನ ಮಾಹಿತಿಯನ್ನ ಕಲೆ ಹಾಕಲಾಗ್ತಿದೆ ಎಂದು ಡಿಎಪ್ಓ ಡಾ. ಬಸವರಾಜ ಅವರು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಮನುಷ್ಯನ ಈ ಕೃತ್ಯಕ್ಕೆ ಮೂಕಪ್ರಾಣಿಗಳು ಜೀವ ತೆತ್ತಿದ್ದು, ಇಂತಹ ಘೋರ ಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಸಧ್ಯ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.

Last Updated : Aug 3, 2021, 8:42 AM IST

ABOUT THE AUTHOR

...view details