ಅರಕಲಗೂಡು: ಪಟ್ಟಣ ಪಂಚಾಯತಿಯ ವಿವಿಧ ಹಣಕಾಸು ಯೋಜನೆಯಡಿ ನಿರ್ಮಿಸಿರುವ 61 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ತಡೆಯಾಜ್ಞೆ ತೆರವಾಗಿದ್ದು, ಶೀಘ್ರದಲ್ಲೇ ಹರಾಜು ಮಾಡಲಾಗುವುದು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ತಡೆಯಾಜ್ಞೆ ತೆರವು: ಶೀಘ್ರದಲ್ಲೇ 61 ವಾಣಿಜ್ಯ ಮಳಿಗೆ ಹರಾಜು
ಹರಾಜಾಗಬೇಕಿದ್ದ 61 ಮಳಿಗೆಗಳ ಪೈಕಿ 13 ಮಂದಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಹರಾಜು ಪ್ರಕ್ರಿಯೆಗೆ ತಡೆಯಾಗಿತ್ತು. ಪಟ್ಟಣ ಪಂಚಾಯತಿ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ರದ್ದು ಕೋರಿತ್ತು. ಇದೀಗ ತಡೆಯಾಜ್ಞೆ ತೆರವಾಗಿದೆ.
ಹಲವು ದಶಕಗಳ ಹಿಂದೆಯೇ ಪಟ್ಟಣ ಪಂಚಾಯತಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಹರಾಜು ಮಾಡಿತ್ತು. ಆದರೆ ಕೆಲವು ವರ್ಷಗಳಿಂದ ಹರಾಜು ಪಡೆದವರ ಪೈಕಿ ಕೆಲವರು ಬಾಕಿ ಪಾವತಿಸದೆ ಇದ್ದುದು ಮತ್ತು ಅವಧಿ ಮೀರಿದ್ದರೂ ಮುಂದುವರೆದಿರುವುದು ಹಾಗೂ ಉಪ ಬಾಡಿಗೆ ನೀಡಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತಿ ಹರಾಜು ಪ್ರಕ್ರಿಯೆಗೆ ಮುಂದಾಗಿತ್ತು. ಆದರೆ ಹರಾಜಾಗಬೇಕಿದ್ದ 61 ಮಳಿಗೆಗಳ ಪೈಕಿ 13 ಮಂದಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಹರಾಜು ಪ್ರಕ್ರಿಯೆಗೆ ತಡೆಯಾಗಿತ್ತು.
ಪಟ್ಟಣ ಪಂಚಾಯತಿ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ರದ್ದು ಕೋರಿತ್ತು. ಇದೀಗ ತಡೆಯಾಜ್ಞೆ ತೆರವಾಗಿದೆ. ಮುಂದಿನ ಪ್ರಕ್ರಿಯೆ ಆರಂಭಿಸಲು ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಾಯಲಾಗುತ್ತಿದೆ. ಶೀಘ್ರವೇ 61 ವಾಣಿಜ್ಯ ಮಳಿಗೆಗಳ ಹರಾಜು ಮಾಡಲಾಗುವುದು ಎಂದು ಪ.ಪಂ ಮುಖ್ಯಾಧಿಕಾರಿ ತಿಳಿಸಿದರು. ಈ ಹರಾಜು ಪ್ರಕ್ರಿಯೆಯಲ್ಲಿ ಈಗ ಮಳಿಗೆಗಳಲ್ಲಿರುವ ಬಾಡಿಗೆದಾರರು ಭಾಗವಹಿಸಬಹುದು ಎಂದು ಅವರು ಹೇಳಿದ್ದಾರೆ.