ಹಾಸನ/ಅರಸೀಕೆರೆ :ಅರಸೀಕೆರೆ ನಗರದ ಹೊರವಲಯದ ಚಿಕ್ಕತಿರುಪತಿ ರಸ್ತೆಯ ಕಾರೇಹಳ್ಳಿಯಲ್ಲಿ ಆಗಸ್ಟ್ 11ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧ 6 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿ ಇಬ್ಬರನ್ನು ಅರಸೀಕೆರೆ ಪೊಲೀಸರು ಬಂಧಿಸಿದ್ದಾರೆ.
ನವಾಜ್ (27) ಕೊಲೆಯಾಗಿದ್ದ ರೌಡಿಶೀಟರ್ ಆಗಿದ್ದು, ಅರಸೀಕೆರೆ ತಾಲೂಕಿನ ಕಾರೆಹಳ್ಳಿ ನಿವಾಸಿಗಳಾದ ಯಶವಂತ್ (23) ಶಿವಸ್ವಾಮಿ (22) ಎಂಬುವರನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಾಗಿರುವ ತೇಜಸ್ (23) ಮನು(23) ಹಾಗೂ ಗುರುರಾಜ್ (24) ತಲೆಮರೆಸಿಕೊಂಡಿದ್ದಾರೆ.
ಕೊಲೆಯಾದ ನವಾಜ್, ಆರೋಪಿ ಯಶವಂತ್ ಬಳಿ ಸಾಲ ಪಡೆದಿದ್ದ. ಈ ಹಣ ಹಿಂತಿರುಗಿಸಬೇಕೆಂದು ಹಲವು ಬಾರಿ ಯಶವಂತ್ ಕೇಳಿದ್ದ. ಆದರೆ, ನಾನು ಅರಸೀಕೆರೆಗೆ ಡಾನ್ ಇದ್ದಂಗೆ, ನನ್ನ ಬಳಿಯೇ ಹಣವನ್ನು ವಾಪಸ್ ಕೇಳ್ತಿಯಾ ಅಂತಾ ನವಾಜ್ ಬೆದರಿಕೆ ಹಾಕಿದ್ದನಂತೆ.