ಕರ್ನಾಟಕ

karnataka

ETV Bharat / state

ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಜೆಡಿಎಸ್​ ಶಾಸಕ ಶಿಷ್ಯನ ವಿಡಿಯೋ ವೈರಲ್​ - ಹಾಸನ ಸುದ್ದಿ

ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರ ಶಿಷ್ಯ ಸಮೀವುಲ್ಲಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ವ್ಯಕ್ತಿಯೋರ್ವನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,ನೆಟ್ಟಿಗರು ಮಾಜಿ ನಗರಸಭಾ ಅಧ್ಯಕ್ಷನ ವಿರುದ್ದ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ.

arasikere-municipality-former-presiden-sameevullah-obscene-noise
ಅಂದು ಶಾಸಕ ಶಿವಲಿಂಗೇಗೌಡ...ಇಂದು ಅವರ ಶಿಷ್ಯ...ಏನ್​ ಸ್ವಾಮಿ ಇದು?

By

Published : Jan 7, 2020, 5:36 AM IST

ಹಾಸನ:ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರ ಶಿಷ್ಯ/ ನಗರ ಸಭೆಯ ಮಾಜಿ ಅಧ್ಯಕ್ಷ ಸಮೀವುಲ್ಲಾ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ವ್ಯಕ್ತಿಯೋರ್ವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಮಾಜಿ ನಗರಸಭಾ ಅಧ್ಯಕ್ಷರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂಸಾರ್ವಜನಿಕ ಕಾರ್ಯಕ್ರಮದಲ್ಲಿ ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಶಿಷ್ಯ ಸಮೀವುಲ್ಲಾ ವ್ಯಕ್ತಿಯನ್ನು ಅವಾಚ್ಯ ಶಬ್ದಗಳಿಂದ ನಿಂದನೆ

ಶಾಸಕ ಶಿವಲಿಂಗೇಗೌಡ ಗದಗದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನಾ ಮಾಹಿತಿಯನ್ನು ನೆರೆದಿದ್ದ ಫಲಾನುಭವಿಗಳಿಗೆ ವಿವರಿಸುತ್ತಿದ್ದರು. ಇದೇ ವೇಳೆ ಶಂಕರ್ ಎಂಬಾತ, 'ಸರ್, ಬ್ಯಾಂಕ್​ನವರು ಆರ್ಥಿಕ ಸ್ಥಿತಿ ಸದೃಢವಾಗಿದ್ದ ಉಳ್ಳವರಿಗೆ ಮಾತ್ರ ಸಾಲ ಕೊಡುತ್ತಾರೆ. ಹೊರತು ಬಡವರಿಗೆ ಕೊಡಲ್ಲ. ಯಾಕೆ ಎಂಬುದನ್ನು ಬ್ಯಾಂಕ್​ನ ಅಧಿಕಾರಿಗಳಿಂದಲೇ ಸ್ಪಷ್ಟಪಡಿಸಿ' ಎಂದು ಆಗ್ರಹಿಸಿದ್ದರು.

ಇದಕ್ಕೆ ವೇದಿಕೆಯ ಮೇಲೆ ಕೂತಿದ್ದ ಅರಸೀಕೆರೆ ನಗರಸಭೆಯ ಮಾಜಿ ಅಧ್ಯಕ್ಷ ಸಮೀವುಲ್ಲಾ ಅವರು ಸಿಟ್ಟಾಗಿ, 'ಅದನ್ನೆಲ್ಲಾ ಕೇಳೋಕೆ ನೀನ್ ಯಾವನೋ? ನೀನೇನು ಪ್ರಧಾನಮಂತ್ರಿ ಯೋಜನಾ ಫಲಾನುಭವಿನಾ? ನಿನ್ನನ್ನು ಇಲ್ಲಿಗೆ ಬರೋದಿಕ್ಕೆ ಯಾವನೋ ಹೇಳಿದ್ದು? ಎಂಬ ಶಬ್ದಗಳು ವಿಡಿಯೋದಲ್ಲಿ ಸೆರೆಯಾಗಿವೆ.

ಕಳೆದ ವಾರವಷ್ಟೇ ಕಾಂಗ್ರೆಸ್​ನವರು ಶಾಸಕ ಶಿವಲಿಂಗೇಗೌಡರಿಗೆ ಪ್ರಶ್ನೆ ಕೇಳಿದ್ದಕ್ಕೆ ಅವ್ಯಾಚ ಶಬ್ದ ಬಳಸಿ, ಬೈದು ಸಾಮಾನ್ಯ ಸಭೆಯಿಂದ ಹೊರ ನಡೆದಿದ್ದರು. ಈಗ ಅವರದ್ದೇ ಸಾಲಿಗೆ ಅವರ ಶಿಷ್ಯ ಸೇರ್ಪಡೆಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಮಾಜಿ ನಗರಸಭಾ ಅಧ್ಯಕ್ಷರನ್ನು ಸಾಮಾಜಿಕ ಜಾಲತಾಣದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ABOUT THE AUTHOR

...view details