ಅರಕಲಗೂಡು: ಪಟ್ಟಣದ ಹಾಸನ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿಗೆ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಶೇ92.05 ಫಲಿತಾಂಶ ದೊರೆತಿದೆ.
ಹಾಸನ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ - ಹಾಸನ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು
ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಹಾಸನ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿಗೆ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ.
ಪರೀಕ್ಷೆ ಬರೆದಿದ್ದ 203 ವಿಧ್ಯಾರ್ಥಿಗಳಲ್ಲಿ 188 ಮಂದಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 118 ವಿಧ್ಯಾರ್ಥಿಗಳಲ್ಲಿ 111 ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಎ.ಎನ್.ಮನೋಜ್ (572), ಎ.ಎಲ್.ವಿದ್ಯಾಶ್ರೀ (569), ಎಚ್.ಆರ್.ದೀಪ್ತಿ (567),ಎಂ.ಹೇಮಂತಗೌಡ (560), ಎ.ಕೆ.ಸುಶ್ಮಿತಾ (559)ಅಂಕಗಳನ್ನು ಪಡೆದು ವಿಜ್ಞಾನ ವಿಭಾಗದಲ್ಲಿ ಶೇ 90 ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ 85 ಮಂದಿ ಪರೀಕ್ಷೆ ಬರೆದಿದ್ದು, 77 ಮಂದಿ ತೇರ್ಗಡೆಯಾಗಿದ್ದಾರೆ. ಇವರಲ್ಲಿ 13 ಮಂದಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದು, ಎಚ್.ವೈ.ಶ್ರೀರಕ್ಷಾ (560), ಎಂ.ಪಿ.ಕೀರ್ತನಾ (558), ಎನ್.ಶ್ರಾವ್ಯ (558) ಪಡೆದು ವಾಣಿಜ್ಯ ವಿಭಾಗದಲ್ಲಿ ಶೇ90.58 ಫಲಿತಾಂಶ ಬಂದಿದೆ ಎಂದು ಪ್ರಾಂಶುಪಾಲ ನವೀನ್ ಮಾಹಿತಿ ನೀಡಿದ್ದಾರೆ.